ಕುಶಾಲನಗರ, ನ. 4: ಕುಶಾಲನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರಯ್ಯಭಾನು ಅವರ ನಿವಾಸದ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಗೆ ಮುಂದಾದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಪಂಚಾಯಿತಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಜೆಡಿಎಸ್ ಅಭ್ಯರ್ಥಿ ಸುರಯ್ಯಭಾನು ಉಪಾಧ್ಯಕ್ಷೆ ಸ್ಥಾನ ಕುಶಾಲನಗರ, ನ. 4: ಕುಶಾಲನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರಯ್ಯಭಾನು ಅವರ ನಿವಾಸದ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಗೆ ಮುಂದಾದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಪಂಚಾಯಿತಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಜೆಡಿಎಸ್ ಅಭ್ಯರ್ಥಿ ಸುರಯ್ಯಭಾನು ಉಪಾಧ್ಯಕ್ಷೆ ಸ್ಥಾನ ಬೆಂಬಲಿಸಿದ್ದೇನೆ. ತನ್ನ ಇಡೀ ಕುಟುಂಬ ಸದಸ್ಯರ ಮತವನ್ನು ಸುರಯ್ಯಭಾನು ಅವರಿಗೆ ನೀಡಿದ್ದೇವೆ. ಇದೀಗ ಅಧಿಕಾರ ಹಾಗೂ ಹಣದ ಆಸೆಯಿಂದ ಏಕಾಏಕಿ ಬಿಜೆಪಿ ಯೊಂದಿಗೆ ಕೈಜೋಡಿಸಿರುವುದು ಮತದಾರರಿಗೆ ಅಸಮಾಧಾನ ಉಂಟುಮಾಡಿದೆ ಎಂದು ಜಬೀವುಲ್ಲ ಆರೋಪಿಸಿದ್ದಾನೆ.
ಘಟನೆ ಸಂದರ್ಭ ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಗಣೇಶ್, ನಿವಾಸದ ಮುಂದೆ ಪ್ರತಿಭಟನೆಗೆ ಮುಂದಾದ ಯುವಕನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂದರ್ಭ ಸ್ವತಃ ಸುರಯ್ಯಭಾನು ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಮಾಡಿ ಆತನ ಮೇಲೆ ಕ್ರಮಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಬಳಿಕ ಪೊಲೀಸರು ಆತನಿಂದ ಮುಚ್ಚಳಿಕೆ ಪಡೆದು ಠಾಣೆಯಿಂದ ಬಿಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.