ಮಡಿಕೇರಿ, ನ. 3: ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ ಏಕಲವ್ಯ ಮಾದರಿ ವಸತಿ ಕಾಲೇಜಿನಲ್ಲಿ 2020-21ನೇ ಸಾಲಿಗೆ ಪ್ರಥಮ ಪಿಯುಸಿ ತರಗತಿಯ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮೀಸಲಾತಿ ಗನುಗುಣವಾಗಿ ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕೃತಗೊಳ್ಳದಿರುವುದರಿಂದ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗಿದೆ. ಆಸಕ್ತ ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತಾ. 10 ರೊಳಗೆ ಬಾಳುಗೋಡಿನ ಏಕಲವ್ಯ ಮಾದರಿ ಪದವಿ ಕಾಲೇಜಿನ ಕಚೇರಿಗೆ ಸಲ್ಲಿಸಬೇಕು. ವೀರಾಜಪೇಟೆ ತಾಲೂಕು ದೂ. 9483162466, 9982499269ನ್ನು ಸಂಪರ್ಕಿಸಬಹುದು.