ಎರಡು ಪದವಿಗಳ ಚುನಾವಣೆಯ ನಂತರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಎರಡು ಪದವಿಗಳು ಪಕ್ಷದ ಪಾಲಾಗಿವೆ. ನೂತನವಾಗಿ ಆಯ್ಕೆಯಾದ ಇಬ್ಬರು ವೀರಾಜಪೇಟೆ ಪಟ್ಟಣದ ಅಭಿವೃದ್ಧಿಗೆ ರಾಜಕೀಯ ರಹಿತವಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಮಾದರಿ ಪಟ್ಟಣ ಪಂಚಾಯಿತಿ: ಶಾಸಕ

ವೀರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಮಾದರಿ ಪಟ್ಟಣ ಪಂಚಾಯಿತಿಯನ್ನಾಗಿಸಲು ನೂತನವಾಗಿ ಆಯ್ಕೆಯಾದ ಇಬ್ಬರು ಶ್ರಮಿಸಲಿದ್ದಾರೆ. ಪಟ್ಟಣದ ನಾಗರಿಕರ ಎಲ್ಲ ಬೇಡಿಕೆಗಳು ಸಮಸೈಗಳಿಗೆ ಅವರು ಸ್ಪಂದಿಸಲಿದ್ದು ಪಕ್ಷದ ವತಿಯಿಂದಲೂ ಪಟ್ಟಣದ ಅಭಿವೃದ್ಧಿಗೆ ಉತ್ತೇಜನ ನೀಡುವುದಾಗಿ ಹೇಳಿದರು.

ನೀರು-ಸ್ವಚ್ಛತೆಗೆ ಆದ್ಯತೆ

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಟಿ.ಆರ್. ಸುಸ್ಮಿತಾ ಮಾತನಾಡಿ ವೀರಾಜಪೇಟೆ ಪಟ್ಟಣದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಕುಡಿಯುವ ನಲ್ಲಿ ನೀರು, ಪಟ್ಟಣದಲ್ಲಿ ಶುಚಿತ್ವ ಕಾಪಾಡುವಿಕೆ, ಜನಪರ ಅಭಿವೃದ್ಧಿ ಕಾಮಗಾರಿಗಳೊಂದಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಪಡುವುದಾಗಿ ಹೇಳಿದರು.