ಪೆÇಲೀಸರ ಮೇಲೆ ಎಫ್‍ಐಆರ್ ದಾಖಲು
ಬೆಂಗಳೂರು, ನ. 2: ಇನ್ಸ್‍ಪೆಕ್ಟರ್ ಭರತ್, ಸಬ್ ಇನ್ಸಪೆಕ್ಟರ್‍ಗಳಾದ ಅಕ್ಷತಾ ಹಾಗೂ ಸಂತೋಷ್, ಮುಖ್ಯಪೇದೆ ಲಿಂಗರಾಜು ಎಂಬವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅಕ್ರಮ ಬಂಧನ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಈಗ ಎಫ್‍ಐಆರ್ ದಾಖಲಾಗಿದೆ. ಇನ್ಸ್‍ಪೆಕ್ಟರ್ ಭರತ್ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಆಗಿದ್ದಾಗ ಮಹಿಳೆಯೊಬ್ಬರನ್ನು ಬಂಧಿಸಿದ್ದರು. ಈಗ ಆ ಮಹಿಳೆ ನನ್ನನ್ನು ಅಕ್ರಮವಾಗಿ ಬಂಧಿಸಿದ್ದರು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಮಾಡಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ನಾಲ್ವರು ಪೆÇಲೀಸರ ಮೇಲೆ ಎಫ್‍ಐಆರ್ ದಾಖಲಾಗಿದೆ. ಭರತ್ ಮಡಿಕೇರಿ ನಗರ ಸಂಚಾರಿ ಹಾಗೂ ನಗರ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಡೀಸೆಲ್ ಮಾರಾಟದಲ್ಲಿ ಹೆಚ್ಚಳ
ನವದೆಹಲಿ, ನ.2 : 8 ತಿಂಗಳ ಬಳಿಕ ಇದೇ ಮೊದಲ ಬಾರಿಗೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಡೀಸೆಲ್ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ತೈಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ತೈಲ ಡೀಸೆಲ್‍ಗೆ ಹಬ್ಬದ ಸೀಸನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಭಾರತದ ಟಾಪ್ ಮೂರು ತೈಲ ರೀಟೇಲರ್ ಗಳ ಬಳಿ ಕಳೆದ ವರ್ಷದ ಅಕ್ಟೋಬರ್‍ಗೆ ಹೋಲಿಸಿದಲ್ಲಿ ಶೇಕಡ 6.1% ಮಾರಾಟ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಈ ವರ್ಷದ ಮಾರ್ಚ್‍ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೇರಿದ್ದ ನಿರ್ಬಂಧದಿಂದಾಗಿ ತೈಲ ಬೇಡಿಕೆ ಕುಸಿದುಹೋಗಿತ್ತು. ಭಾರತದ ಅತಿ ದೊಡ್ಡ ತೈಲ ಸಂಸ್ಕರಣಾ ಕಂಪೆನಿ ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಒಟ್ಟು ಸಾಮಥ್ರ್ಯದ 93ರಷ್ಟು ಉತ್ಪಾದಿಸುತ್ತಿದೆ. ಶೀಘ್ರವೇ ಶೇ. 100ರಷ್ಟು ಉತ್ಪಾದನೆ ಮಾಡಲಿದ್ದು ಅಕ್ಟೋಬರ್ ಮಧ್ಯ ಭಾಗದಿಂದ ಶುರುವಾಗಿ ಒಂದು ತಿಂಗಳಿಗೂ ಹೆಚ್ಚು ಸಮಯ ಇದು ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.
ಪ್ರಾಂಶುಪಾಲರು, ಶಿಕ್ಷಕರಿಗೆ ವೇತನವೇ ಇಲ್ಲ
ಬೆಂಗಳೂರು, ನ.2 : ರಾಜ್ಯದಲ್ಲಿರುವ 450 ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಕನಿಷ್ಟ 532 ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಕಳೆದ ಏಳು ತಿಂಗಳಿನಿಂದ ವೇತನವೇ ಸಿಕ್ಕಿಲ್ಲ. ಈ ಬಗ್ಗೆ ಇದೀಗ ಕರ್ನಾಟಕ ಲೋಕಾಯುಕ್ತ ಜಸ್ಟೀಸ್ ವಿಶ್ವನಾಥ ಶೆಟ್ಟಿ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಸಮಾಜ ಕಲ್ಯಾಣ ಇಲಾಖೆಗೆ ಶಿಕ್ಷಕರ ದೂರು-ದುಮ್ಮಾನಗಳು ಮತ್ತು ಸಂಕಷ್ಟಗಳನ್ನು ಆದಷ್ಟು ಬೇಗನೆ ಬಗೆಹರಿಸುವಂತೆ ಹೇಳಿದ್ದಾರೆ. ಉದ್ಯೋಗಿಗೆ ಪಾವತಿಸುವ ವೇತನವು ಅನಪೇಕ್ಷಿತ ಪಾವತಿಗಳಲ್ಲ ಎಂದು ಗಮನಸೆಳೆಯುವ ಅಗತ್ಯವಿಲ್ಲ. ಒಬ್ಬ ನೌಕರನು ಅವನು / ಅವಳು ಕೈಗೊಂಡ ಕೆಲಸಕ್ಕಾಗಿ ಗಳಿಸಿದ ಮೊತ್ತವಾಗಿರುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಶೆಟ್ಟಿ ರಾಜ್ಯ ಸರ್ಕಾರವನ್ನು ನೆನಪಿಸಿದರು, ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಸಂಬಳ ನೀಡುವಲ್ಲಿ ವಿಳಂಬವು ಅವರ ಜೀವನ ಹಕ್ಕಿನ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ ಮತ್ತು ಈ ಶಾಲೆಗಳಲ್ಲಿ ಓದುವ ಮಕ್ಕಳ ಶಿಕ್ಷಣ ಗುಣಮಟ್ಟದ ಮೇಲೆ ಸಹ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣಕ್ಕೆ ಪೋಲಿಯೋ ಲಸಿಕೆ !
ಬೆಂಗಳೂರು, ನ.2 : ಕೋವಿಡ್-19ಗೆ ಲಸಿಕೆ ಬರಲು ಇನ್ನೂ ಕೆಲವು ತಿಂಗಳು ಸಮಯ ಬೇಕಾಗಿರುವುದರಿಂದ ಬೆಂಗಳೂರು, ಅಮೆರಿಕ, ಇಂಗ್ಲೆಂಡಿನ ತಜ್ಞರು ಹೇಳುವ ಪ್ರಕಾರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೆÇೀಲಿಯೋ ಲಸಿಕೆಯನ್ನು ಬಳಸಬಹುದಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೆÇೀಲಿಯೋ ಲಸಿಕೆಯನ್ನು ಕೊರೋನಾ ವಿರುದ್ಧ ಹೋರಾಡಲು ನೀಡಬಹುದು ಎಂದು ಸಲಹೆ ನೀಡಿ ವೈಜ್ಞಾನಿಕ ವರದಿ ಸಿದ್ದಪಡಿಸಿದ್ದಾರೆ. ಪೆÇೀಲಿಯೋ ಲಸಿಕೆ ಮತ್ತು ಕೋವಿಡ್ 19ನ ವೈದ್ಯಕೀಯ ಅಧ್ಯಯನವನ್ನು ಇತ್ತೀಚೆಗೆ ತಜ್ಞರು ಬೆಂಗಳೂರಿನ ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಾಡಿದ್ದರು. ಕೋವಿಡ್-19 ರೋಗಿಗಳಿಗೆ ಆರಂಭದಲ್ಲಿಯೇ ಪೆÇೀಲಿಯೋ ಲಸಿಕೆ ನೀಡಿದರೆ ವೈರಸ್ ನ್ನು ಬೇಗನೆ ಕೊಲ್ಲಲು ಸಹಾಯ ಮಾಡುತ್ತದೆ. ಅಲ್ಲದೆ ವಯಸ್ಸಾದವರಲ್ಲಿ ಸಹ ಕೊರೊನಾ ಸೋಂಕು ತಗಲುವುದನ್ನು ತಡೆಗಟ್ಟುತ್ತದೆ. ಈ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ
ನವದೆಹಲಿ, ನ.2 : ದೆಹಲಿಯಲ್ಲಿ ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು. ಮತ್ತೆ ಇದೀಗ 19 ಕೆಜಿ ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 75 ರೂಪಾಯಿ ಹೆಚ್ಚಿಸಲಾಗಿದೆ. ಈ ಕುರಿತು ಇಂಡಿಯನ್ ಆಯಿಲ್ ಕಾಪೆರ್Çೀರೇಷನ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು 75 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ರೂ.1241.50ಕ್ಕೆ ಏರಿಕೆಯಾದಂತೆ ಆಗಿದೆ. ಕಳೆದ ಅಕ್ಟೋಬರ್ ನಲ್ಲಿ ಈ ಬೆಲೆ ರೂ.1166 ಆಗಿತ್ತು. ಇನ್ನೂ ಕೇವಲ ಕಮರ್ಷಿಯಲ್ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿದ್ದು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ