ದಿನ ವ್ಯತ್ಯಾಸ

ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದ ಎಲ್ಲೆಡೆಯಲ್ಲೂ ವ್ಯಾವಹಾರಿಕ ಮತ್ತು ಆಡಳಿತ ಉದ್ದೇಶಗಳಿಗೆ ಬಳಕೆಯಲ್ಲಿರುವ ಗ್ರಿಗೋರಿ ಪಂಚಾಂಗ ಅಥವಾ ಕ್ಯಾಲೆಂಡರನ್ನು ಭಾರತ ದೇಶ ಬಳಸುತ್ತಿದ್ದರೂ, ನಮ್ಮ ದೇಶದ ಹಿಂದೂ, ಮುಸ್ಲಿಮ್, ಬೌದ್ಧರ, ಜೈನರ ಸುಮಾರು 30 ಹಬ್ಬಗಳ ತಿಥಿ, ಮುಹೂರ್ತಗಳನ್ನು ನಿರ್ಣಯಿಸುವುದು ಸೂರ್ಯ ಸಂಚಾರ ಮತ್ತು ಚಂದ್ರಸಂಚಾರ ಆಧಾರದಲ್ಲಿ. ಕೊಡವರ ಧಾರ್ಮಿಕ ಹಬ್ಬಗಳು ಸೂರ್ಯ ಸಂಚಾರ, ಸೌರಮಾನ ಆಧಾರದಲ್ಲಿ ನಿಂತಿದೆ. ಭೂಮಿಯ ಚಲನೆಯ ಆಧಾರವಾಗಿ, ಸೂರ್ಯನು ಅಶ್ವಿನಿ ನಕ್ಷತ್ರ ಒಂದನೇ ಪಾದಕ್ಕೆ ಪ್ರವೇಶಿಸಿದಾಗ, ಮೇಷ ಮಾಸಂ ಅಥವಾ ಕೊಡವ ಭಾಷೆಯಲ್ಲಿ ಎಡಮ್ಯಾರ್ ಒಂದ್ ಅಥವಾ ಬಿಸು ಚಂಗ್ರಾಂದಿ ಸೌರಮಾನ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಸೂರ್ಯನು ತುಲಾ ರಾಶಿ ಪ್ರವೇಶಿಸಿದಾಗ, ಅಥವಾ ಚಿತ್ತಾ ನಕ್ಷತ್ರ ಮೂರನೇ ಪಾದಕ್ಕೆ ಪ್ರವೇಶಿಸಿದಾಗ ನಮ್ಮ ಕಾವೇರಮ್ಮೆ ದೇವಿತಾಯಿಯು, ತೀರ್ಥ ಸ್ವರೂಪಿಣಿಯಾಗಿ ನಮಗೆ ದರ್ಶನ ಕೊಡುವ ಪವಿತ್ರ ದಿನವನ್ನು ಕೊಡವ ಭಾಷೆಯಲ್ಲಿ ತೊಲ್ಯಾರ್ ಒಂದ್, ತೊಲ್ಯಾರ್ ಚಂಗ್ರಾಂದಿ ಎನ್ನುತ್ತಾರೆ. ತುಲಾ ಮಾಸದ ಹತ್ತನೇ ದಿನವÀನ್ನು ಕೊಡವರು ಪತ್ತಲೋದಿ ಎನ್ನುತ್ತಾರೆ.

ಸಾಡೆತೀನ್ ಅಥವಾ ಮೂರುವರೆ ಮುಹೂರ್ತಗಳು ಹಿಂದೂಗಳಿಗೆ ಹೇಗೆ ಶುಭ ದಿನವೋ (ಚೈತ್ರ ಶುದ್ಧ ಪಾಡ್ಯಮಿ, ವೈಶಾಖ ಶುದ್ಧ ತದಿಗೆ ಅಶ್ವಿಜ ಶುದ್ಧ ದಶಮಿ ಹಾಗೂ ಕಾರ್ತಿಕ ಶುದ್ಧ ಪಾಡ್ಯಮಿ ಉದಯದಿಂದ ಮದ್ಯಾಹ್ನದವರೆಗೆ ಅರ್ಧ ಮುಹೂರ್ತ) ಪಂಚಾಂಗ ಶುದ್ಧಿಯ ಅವಶ್ಯಕತೆ ಇಲ್ಲದೆ ಎಲ್ಲಾ ಶುಭ ಕಾರ್ಯಗಳನ್ನು ಮಾಡಬಹುದೋ ಹಾಗೇ ಕೊಡವರಿಗೆ ಪತ್ತಲೋದಿಯಂದು ಯಾವುದೇ ಪಂಚಾಂಗ ಶುದ್ಧಿಯ ಅವಶ್ಯಕತೆ ಇಲ್ಲದೆ ಎಲ್ಲಾ ಶುಭ ಕಾರ್ಯಗಳನ್ನು ಮಾಡಬಹುದಾದ ಪವಿತ್ರ ದಿನ. ಸಾಡೇತೀನ್ ದಿನಗಳಲ್ಲಿ ಎಲ್ಲಾ ನಕ್ಷತ್ರದವರು ಎಲ್ಲಾ ವಿಧವಾದ ಶುಭಕಾರ್ಯಗಳನ್ನು ಮಾಡಿದರೆ, ಶ್ರೇಯಸ್ಸು, ಯಶಸ್ಸು ಉಂಟಾಗುತ್ತದೆ ಎಂದು ಹಿಂದೂಗಳು ಹೇಗೆ ನಂಬಿದ್ದಾರೋ ಹಾಗೇ ಪತ್ತಲೋದಿಯ ದಿನದಂದು ಶುಭಕಾರ್ಯ ಮಾಡಿದರೆ ಶ್ರೇಯಸ್ಸು-ಯಶಸ್ಸು ಉಂಟಾಗುತ್ತದೆ. ಎಂದು ಕೊಡವರು ನಂಬುತ್ತಾರೆ. ಅಂದಿನ ದಿನ ಹೆಣ್ಣು ಮಕ್ಕಳಿಗೆ ಕಿವಿಚುಚ್ಚಿ ಚಿನ್ನದ ಓಲೆ ಹಾಕುತ್ತಾರೆ. ಹೀಗೆ ಅನೇಕ ಶುಭಕಾರ್ಯಗಳನ್ನು ಮಾಡುತ್ತಾರೆ. ಆದರೆ ಈ ವರ್ಷ ಪತ್ತಲೋದಿ ನಮ್ಮೆಯನ್ನು 26-10-2020 ಎಂದರು ಕೆಲವರು. ಇನ್ನು ಕೆಲವರು 27-10-2020 ಎಂದರು. ಇದೇ ವಿಷಯವಾಗಿ ನಾವು ಕೆಲವು ಮಹಿಳೆಯರು ಚರ್ಚಿಸುತ್ತಿದ್ದಾಗ, ಅಪ್ಪಾರಂಡ ಮೀರ ಹೇಳಿದರು: ಶ್ರೀ ಕೃಷ್ಣ ಪಂಚಾಂಗದಲ್ಲಿ (ಉಡುಪಿ) ತೊಲ್ಯಾರ್ ಪತ್ತ್ 27-10-2020 ಎಂದಿದೆ ಎಂದರು. ಬಿದ್ದಾಟಂಡ ಕವಿತಾ ದಿನೇಶ್‍ರವರು ಅದಕ್ಕೆ ದ್ವನಿಗೂಡಿಸಿದರು. ಅದರಂತೆ ನಾವು ಶ್ರೀಕೃಷ್ಣ ಪಂಚಾಂಗವನ್ನು ಪರಿಶೀಲಿಸಿದಾಗ ಪಂಚಾಂಗದ 4ನೇ ಹಾಳೆಯಲ್ಲಿ ಇಂತಿತ್ತು: ‘‘ಪ್ರಭವಾದಿ ಸಂವತ್ಸರ ಚಕ್ರದಲ್ಲಿ ಮೂವತ್ತ ನಾಲ್ಕನೆಯದಾದ ಶ್ರೀ ಶಾರ್ವರೀ ಸಂವತ್ಸರದಲ್ಲಿ ರಾಜಾಮಾತ್ಯರು ಕ್ರಮವಾಗಿ ಬುದ-ಚಂದ್ರರೂ ಸೌರಪಕ್ಷದಂತೆ ಚಂದ್ರ-ಬುಧರೂ ಆಗಿರುವರು. ಸೇನಾರ್ಘ ಮೇಷ ಪತಿಯಾಗಿ ಸೂರ್ಯನೂ, ಸಸ್ಯ ನೀರಸಾಧಿಪತಿಗಳಾಗಿ ಗುರುವೂ, ರಸಕ್ಕೆ ಶನಿ, ಧ್ಯಾನಕ್ಕೆ ಕುಜ, ಕೋಶಕ್ಕೆ ರವಿ ಎಂದು ಸರಿಯಾಗಿಯೇ ಪ್ರಕಟಿಸಲಾಗಿದೆ. ನಮ್ಮ ಸೌರ ಮಂಡಲದ ಆಡಳಿತ ಮಂಡಳಿಯಲ್ಲಿ ಒಂಭತ್ತು ಗ್ರಹಾಧಿಪತಿಗಳಲ್ಲಿ ಒಬ್ಬೊಬ್ಬರು ಒಂದೊಂದು ವಿಭಾಗದಲ್ಲಿ ಮಂತ್ರಿಗಳಾಗಿರುತ್ತಾರೆ. ಅವರ ಅವಧಿ 1 ವರ್ಷಗಳ ಕಾಲ ಮಾತ್ರ. ಶಾರ್ವರಿ ಸಂವತ್ಸರಲ್ಲಿ ಮಂತ್ರಿಗಳಾಗಿದ್ದ ಗ್ರಹಗಳು ಶ್ರೀಪ್ಲವ ಸಂವತ್ಸರದಲ್ಲಿ (2021) ಬದಲಾಗುತ್ತಾರೆ. ಈ ವರ್ಷದ ಮಂತ್ರಿಗಳಾರ್ಯಾರೆಂದೂ ಅವರ ವಿಭಾಗ ಯಾವುದೆಂದೂ ನಿರ್ಧರಿಸುವುದು ಸಹ ಅರ್ಥಪೂರ್ಣವಾಗಿದೆ.

ಶಾರ್ವರೀ ಸಂವತ್ಸರದ ಚಾಂದ್ರಮಾನ ಯುಗಾದಿ ಅಥವಾ ಚೈತ್ರಶುದ್ದ ಪಾಡ್ಯಮಿಯು ಬುಧವಾರ ಆಗಿರುವುದರಿಂದ (25-3-2020) ಶಾರ್ವರಿ ಸಂವತ್ಸರದ ರಾಜ-ಬುಧ ಗ್ರಹವಾಗಿದೆ. ಸೌರಮಾನ ಯುಗಾದಿಯು 13.4.2020 ರಂದು ಅಂದರೆ ಸೋಮವಾರ ಆಗಿದ್ದುದರಿಂದ ಚಂದ್ರನು ಶಾರ್ವರಿ ಸಂವತ್ಸರದ ಮಂತ್ರಿಯಾಗಿರುತ್ತಾನೆ. ತುಲಾ ಮಾಸಂ ಅಥವಾ ನಮ್ಮ ಕಾವೇರಿ ತಾಯಿಯು ನಮಗೆ ತೀರ್ಥರೂಪದಲ್ಲಿ ದರ್ಶನ ಕೊಡುವ ದಿನ ಅಥವಾ ತುಲಾ ಮಾಸದ ಒಂದೇ ದಿನದ ಅಧಿಪತಿಯು ರಸಾಧಿಪತಿಯಾಗುತ್ತಾನೆ. (ಐoಡಿಜ oಜಿ ರಿuiಛಿಥಿ ಠಿಡಿoಜuಛಿಣs) ಶಾರ್ವರಿ ಸಂವತ್ಸರದ ರಸಾಧಿಪತಿಯು ಶನಿಗ್ರಹವಾಗುತ್ತದೆ. ರಾಜ, ಮಂತ್ರಿ ರಸಾಧಿಪತಿಗಳ ಅಧಿಕಾರಸ್ಥಾನವನ್ನು ಮಂತ್ರಿಸ್ಥಾನವನನ್ನು ಸರಿಯಾಗಿಯೇ ಪ್ರಕಟಿಸಿದ ಶ್ರೀಕೃಷ್ಣ ಪಂಚಾಂಗವು ಏಪ್ರಿಲ್ 14 ರಂದು ಸೌರಮಾನ ಯುಗಾದಿಯೆಂದೂ, ಅಥವಾ ಮೇಷ ಮಾಸದ ಒಂದನೇ ದಿನವೆಂದೂ 18-10-2020 ನ್ನು ತುಲಾ ಮಾಸದ ಒಂದನೇ ದಿನವೆಂದೂ ಪ್ರಕಟಿಸಿದ್ದಾರೆ. 14-4-2020 ಮಂಗಳವಾರವಾಗುವುದು. ಹಾಗಾದರೆ ಕುಜಗ್ರಹ ರಾಜನಾಗಬೇಕಲ್ಲವೆ ? 18-10-2020 ರವಿವಾರವಾಗುವು ದರಿಂದ ಸೂರ್ಯನು ರಸಾಧಿಪತಿ ಆಗಬೇಕಲ್ಲವೆ ? ಇದು ಐeಚಿಠಿ ಥಿeಚಿಡಿ ನಿಂದ ಮಾಡಿದ ತಪ್ಪೇ ? ಅಥವಾ ಸೌರಯುಗಾದಿ ತಪ್ಪಾಗಿರುವುದರಿಂದ ಸೌರಮಾನ ಆಧಾರದ ಎಲ್ಲಾ ದಿನಗಳೂ ತಪ್ಪಾಗಿ ಪ್ರಕಟವಾದವೇ ? 17-10-2020 ಶನಿವಾರ ತುಲಾ ಮಾಸದ ಒಂದನೇ ದಿನವಾದರೆ 26-10-2020 ಕೊಡವರ ಪತ್ತಲೋದಿಯಾಗಿದೆ.

ಶಾರ್ವರಿ ಸಂವತ್ಸರದ ಮಕರ ಸಂಕ್ರಮಣ ಅಥವಾ ಮಕರ ಮಾಸದ ಒಂದನೇ ದಿನವು 14-1-2021ಕ್ಕೆ ಆಗುತ್ತದೆ. ಶಾರ್ವರಿ ಸಂವತ್ಸರದ ನೀರಸಾಧಿಪತಿಯು ಗುರುವಾಗುತ್ತಾನೆ. ಶ್ರೀಕೃಷ್ಣ ಪಂಚಾಂಗದಲ್ಲಿ ನೀರಸಾಧಿಪತಿಯಾಗಿ ಗುರುವೆಂದು ಬರೆದಿದ್ದರೂ 15-1-2021ಕ್ಕೆ ಮಕರ ಮಾಸದ ಒಂದನೇ ದಿನವೆಂದು ಪ್ರಕಟಗೊಂಡಿದೆ. 30-11-20ರಂದು ದಿನವಿಡೀ ರೋಹಿಣಿ ನಕ್ಷತ್ರವಿರುವುದರಿಂದ ಆ ದಿನ ಪುತ್ತರಿಯಾಗ ಬಹುದೆಂದು ನಾವೆಲ್ಲಾ ನಂಬಿದ್ದೇವೆ. 29-11-20ರಂದು ಕೃತ್ತಿಕಾ ನಕ್ಷತ್ರವಿರುವುದರಿಂದ ಇಗ್ಗುತಪ್ಪ ದೇವರು ಮಲ್ಮಕ್ಕೆ ಹೋಗಿ ದೇಶಕಟ್ಟು ಬಿಡಿಸುವುದೆಂದು ನಾವು ನಂಬಿದ್ದೇವೆ.

-ಕರೋಟಿರ ಶಶಿ ಸುಬ್ರಮಣಿ, ವೀರಾಜಪೇಟೆ.