ಬೆಂಗಳೂರು, ನ.2 : ವಿದೇಶಗಳಿಂದ ಡಾರ್ಕ್ ನೆಟ್ ಮುಖಾಂತರ ಮಾದಕ ವಸ್ತುಗಳನ್ನು ಅಕ್ರಮವಾಗಿ ಸರಬರಾಜು ಮಾಡಿಕೊಂಡು ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಓರ್ವ ನೈಜಿರಿಯಾ ಪ್ರಜೆ ಸೇರಿ 10 ಜನ ಕುಖ್ಯಾತ ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೆÇಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಸನ್ನೀ ಓ ಇನೋಶೇಂಟ್(26), ಸಾರ್ಥಕ್ ಆರ್ಯ(31), ನಿತೀನ್ (24), ಕಾರ್ತಿಕ್ ಗೌಡ (25), ಝಮಾನ್ ಹಂಜಾಮಿನಾ (25) ಸೇರಿ ಹತ್ತು ಜನ ಬಂಧಿತ ಆರೋಪಿಗಳು. ಬಂಧಿತರಿಂದಸುಮಾರು 90 ಲಕ್ಷ ರೂ. ಮೌಲ್ಯದ ಮಾದಕ ವಸ್ತಗಳಾದ 660 ಎಲ್.ಎಸ್.ಡಿ ಪೇಪರ್ ಳನ್ನು 386 ಎಂ.ಡಿ.ಎಂ.ಎ, 180 ಎಕ್ಸ್ ಟೆಸಿ ಮಾತ್ರೆಗಳು, 12 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, 10 ಗ್ರಾಂ ಕೋಕೇನ್ ಪುಡಿಯನ್ನು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಪೆÇೀನ್, 3 ಲ್ಯಾಪ್ ಟಾಪ್, 2 ದ್ವಿಚಕ್ರ ವಾಹನ,ಪೆÇೀಸ್ಟಲ್ ಕವರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.

ಅಪಘಾತದಲ್ಲಿ ನಾಲ್ವರು ಸಜೀವ ದಹನ

ಕಡಪ, ನ.2 : ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ವಲ್ಲೂರು ಮಂಡಲ್ ನ ಗೊಟೂರು ಎಂಬ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕೆಂಪು ಮರಳು ಕಳ್ಳಸಾಗಣೆದಾರರು ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಕಾರ್ಪಿಯೊ ವಾಹನದಲ್ಲಿ ನಾಲ್ವರು ಕಳ್ಳಸಾಗಣೆದಾರರು ಕೆಂಪು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆಯಿತು. ಆಗ ಇಂಧನ ತುಂಬಿದ್ದ ಟ್ಯಾಂಕ್ ಗೆ ಬೆಂಕಿ ಹತ್ತಿಕೊಂಡು ಜ್ವಾಲೆ ವ್ಯಾಪಕವಾಗಿ ಹೊತ್ತಿ ಉರಿಯಿತು. ಆಗ ಮತ್ತೊಂದು ಕಾರು ಹಿಂದಿನಿಂದ ಬಂದು ಸ್ಕಾರ್ಪಿಯೊಗೆ ಡಿಕ್ಕಿ ಹೊಡೆಯಿತು. ಸ್ಕಾರ್ಪಿಯೊದಲ್ಲಿದ್ದ ಚಾಲಕ ಮತ್ತು ಇತರ ಮೂವರು ಹೊತ್ತಿ ಉರಿದು ಸಜೀವ ದಹನವಾದರು. ಮತ್ತೊಂದು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಪೆÇಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.