ಗೋಣಿಕೊಪ್ಪ ವರದಿ, ನ. 1: ಶಾಸಕ ಕೆ. ಜಿ. ಬೋಪಯ್ಯ ಅವರ ವಿಶೇಷ 9 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹರಿಹರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಗ್ರಾಮಸ್ಥರು ಭಾನುವಾರ ಚಾಲನೆ ನೀಡಿದರು.
ಗ್ರಾಮದ ಪ್ರಮುಖರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷೆ ಬೊಳ್ಳಜೀರ ಸುಶೀಲಾ ಅಶೋಕ್, ಟಿ. ಶೆಟ್ಟಿಗೇರಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ನಾಗವಂಡ ಕೃಪ, ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಉಮೇಶ್, ಪ್ರಮುಖರಾದ ಬಾಚೀರ ಶೈಲಾ, ಮನ್ನೇರ ಸಿದ್ದು, ಮನ್ನೇರ ಅಜಿತ್, ಪೆಮ್ಮಣಮಾಡ ರಾಮು, ಅಜ್ಜಿಕುಟ್ಟೀರ ಉತ್ತಪ್ಪ, ತೀತೀರ ಸೋಮಣ್ಣ, ತೀತೀರ ರಘು, ತೀತೀರ ಪೂವಣ್ಣ ಉಪಸ್ಥಿತರಿದ್ದರು.