ಮಡಿಕೇರಿ, ನ. 1: ಶ್ರೀಮಂಗಲ ನಾಡು ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವರ ಉತ್ಸವ ತಾ. 3ರಂದು (ನಾಳೆ) ಜರುಗಲಿದೆ. ಅಂದು ಸಂಜೆ 6 ಗಂಟೆಗೆ ದೇವರ ಅವಭೃತ ಸ್ನಾನ ನಡೆಯಲಿದ್ದು, ಈ ಬಾರಿ ಕೋವಿಡ್ ಮಾರ್ಗ ಸೂಚಿಯಂತೆ ಸರಳ ಹಾಗೂ ಸಾಂಪ್ರದಾಯಿಕ ಆಚರಣೆ ಮಾತ್ರ ನಡೆಯಲಿದೆ.

ಅನ್ನಸಂತರ್ಪಣೆ ಇರುವುದಿಲ್ಲ ಎಂದು ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.