ಮಡಿಕೇರಿ, ನ. 1: 1834ರಿಂದ 1837ರ ವರೆಗೆ ಅಮರಸುಳ್ಯದ ಕ್ರಾಂತಿಯ ದಿನ ತಿಳ್ಕೊಂಡಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಯಾವುದೇ ಜಾತಿ ಹಿನ್ನೆಲೆಯ ಹೋರಾಟಗಳಿರಲಿಲ್ಲ. ಆಗ ಭಾವನೆಗಳಿದ್ದವು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸುಳ್ಯ ನಗರ ಅರೆಭಾಷಿಗರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ಎ.ಪಿ.ಎಂ.ಸಿ ಸಮುದಾಯದ ಭವನದಲ್ಲಿ ನಡೆದ "ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟಗಾರರ ನೆಂಪು ಮಾಡುವ ಜಂಬರದ" ಮುಖ್ಯ ಅತಿಥಿಯಾಗಿ ಮಾತನಾಡುತ್ತ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು ಇದರ ಕನ್ನಡ ಪ್ರಾಧ್ಯಾಪಕ ವಿಶ್ವನಾಥ್ ಬದಿಕಾನ ಮಾತನಾಡಿ, ವಸಾಹತುಶಾಹಿ ನೆಲೆಯಲ್ಲಿ ಅಮರಸುಳ್ಯದ ಹೋರಾಟನ್ನು ನೋಡಬೇಕಾದ ಅನಿವಾರ್ಯ ಇಂದು ಎದುರಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ ಮಾತನಾಡಿ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಕೆಲದಿನಗಳ ಹಿಂದೆ "ಅಂತರಜಾಲಿ ಉಪನ್ಯಾಸ ಮಾಲೆ" ಎಂಬ ಕಾರ್ಯಕ್ರಮವನ್ನು ಸತತ ನಾಲ್ಕು ದಿನಗಳಿಂದ ಹಮ್ಮಿಕೊಳ್ಳಲಾಯಿತು ಎಂದು ನೆನಪಿಸಿದರು.
ಈ ಸಂದರ್ಭ ಎ.ಪಿ.ಎಂ.ಸಿ ಸುಳ್ಯ ಅಧ್ಯಕ್ಷ ವಿನಯ ಮುಳುಗಾಡು, ಗೌಡರ ಯುವಸೇವಾ ಸಂಘ ಅಧ್ಯಕ್ಷ ಮೋಹನ್ ರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.