ನಾಪೆÇೀಕ್ಲು, ಅ. 30: ಸರಕಾರ ಘೋಷಿಸಿದ ಬೆಳೆ ಪರಿಹಾರ ಸಂಬಂಧ ತಯಾರಿಸಲಾಗಿರುವ ಗ್ರಾಮಗಳ ಪಟ್ಟಿಯಲ್ಲಿ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕರಡ, ಪೆÇದವಾಡ ಮತ್ತು ಅರಪಟ್ಟು ಗ್ರಾಮಗಳ ಹೆಸರುಗಳನ್ನು ಕೈಬಿಟ್ಟರುವದಕ್ಕೆ ಈ ಗ್ರಾಮದ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರುಗಳು ಕರಡ ಗ್ರಾಮ ಮಲೆತಿರಿಕೆ ಬೆಟ್ಟಕ್ಕೆ ಹೊಂದಿಕೊಂಡಿದ್ದು, ಪ್ರತೀ ವರ್ಷ ಅತೀ ಹೆಚ್ಚು ಮಳೆ ಸುರಿಯುವ ಗ್ರಾಮವಾಗಿದೆ. ಅದರಂತೆ ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಪೆÇದವಾಡ ಮತ್ತು ಅರಪಟ್ಟು ಗ್ರಾಮಗಳಲ್ಲಿಯೂ ಹೆಚ್ಚಿನ ಮಳೆ ಸುರಿಯುತ್ತದೆ. ಈ ವರ್ಷ ಸುರಿದ ಮಳೆ, ಗಾಳಿಯ ಪರಿಣಾಮ ಮರ, ರೆಂಬೆ ಕೊಂಬೆ ತೋಟಕ್ಕೆ ಮುರಿದು ಬಿದ್ದ ಕಾರಣ ಕಾಫಿ ತೋಟದಲ್ಲಿ ಭಾರೀ ನಷ್ಟ ಉಂಟಾಗಿದೆ. ಕಾಫಿ ಫಸಲು, ಕಾಳುಮೆಣಸು ನೆಲಕಚ್ಚಿದೆ. ಅಂತರ ಬೆಳೆಯಾಗಿರುವ ಅಡಿಕೆಗೆ ಕೊಳೆರೋಗ ಕಾಣಿಸಿಕೊಂಡು ಫಸಲು ಸಂಪೂರ್ಣ ನಾಶಗೊಂಡಿದೆ. ಆದುದ್ದರಿಂದ ಸರಕಾರ, ಕಂದಾಯ ಇಲಾಖೆ, ಕಾಫಿ ಮಂಡಳಿ ಸೇರಿದಂತೆ ಸಂಬಂಧಿಸಿದವರು ರೈತರ ಕಷ್ಟವನ್ನು ಅರಿತು ನಮಗೂ ಬೆಳೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.