ವೀರಾಜಪೇಟೆ, ಅ. 30: ಕಳೆದ ಹಲವು ವರ್ಷಗಳಿಂದ ಮೂಲ ಸೌಕರ್ಯದಿಂದ ವಂಚಿತರಾಗಿ ವಾಸಿಸಲು ಯೋಗ್ಯವಲ್ಲದ ಪುಟ್ಟ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದೆ ಸಂಕಷ್ಟ ಕ್ಕೊಳಗಾಗಿದ್ದ ಗುಂಡಿಗೆರೆ ಗ್ರಾಮದ ವಿಶೇಷಚೇತನ ಕುಟುಂಬವೊಂದಕ್ಕೆ ರೂ. 10 ಲಕ್ಷದ ಮನೆ ನಿರ್ಮಿಸಿಕೊಟ್ಟು ಕೊಡಗಿನ ಬಡವರ ಬೆಳಕು ಚಾರಿಟೆಬಲ್ ಟ್ರಸ್ಟ್‍ನವರು ಮಾನವೀಯತೆ ಮೆರೆದಿದ್ದಾರೆ.

ಗುಂಡಿಗೆರೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮನೆಯನ್ನು ಎಮ್ಮೆಮಾಡು ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ ವಿಶೇಷಚೇತನ ಕುಟುಂಬಕ್ಕೆ ಕೀ ಹಸ್ತಾಂತರ ಮಾಡಿದರು.

ಕೊಡಗು ನಾಯಿಬ್ ಖಾಝಿ ಮಹಮೂದ್ ಉಸ್ತಾದ್ ಮನೆ ಹಸ್ತಾಂತರ ಸರಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಡಗು ಜಿಲ್ಲಾ ನಾಯಿಬ್ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ ಉಸ್ತಾದ್, ಕೊಡಗಿನ ಬಡವರ ಬೆಳಕು ಚಾರಿಟೆಬಲ್ ಟ್ರಸ್ಟ್‍ನ ಜಿಲ್ಲಾಧ್ಯಕ್ಷ ಎಂ.ಹೆಚ್. ಮಹಮ್ಮದ್ ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ, ಟ್ರಸ್ಟ್ ಕಾರ್ಯದರ್ಶಿ ನೌಶಾದ್ ಜನ್ನತ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಗುಂಡಿಗೆರೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್, ಉದ್ಯಮಿ ಆಲೀರ ಪವಿಲ್, ಬಡವರ ಬೆಳಕು ಟ್ರಸ್ಟ್‍ನ ಕಾರ್ಯಾಧ್ಯಕ್ಷ ಸಿ.ಎ. ಪತ್ಹಾಹ್, ಉಪಾಧ್ಯಕ್ಷ ಬಿ.ಎಂ. ಅಶ್ರಫ್, ಖಜಾಂಚಿ ಪಿ.ಎ. ಮಜೀದ್, ನಿರ್ದೇಶಕರುಗಳಾದ ನಾಸಿರ್ ಮಕ್ಕಿ, ಸಿ.ಕೆ ಜಲೀಲ್, ಪತ್ರಕರ್ತ ಎಂ.ಇ. ಮೊಹಮ್ಮದ್, ಸಹಕಾರ್ಯದರ್ಶಿ ಕುವೇಂಡ ಸಫೀಕ್ ಗುಂಡಿಗೆರೆ ಸೇರಿದಂತೆ ಮತ್ತಿತರರು ಹಾಜರಿದ್ದರು.