ಮಡಿಕೇರಿ, ಅ. 30: ರಾಫಲ್ಸ್ ಇಂಟರ್‍ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಜಿಲ್ಲೆಯ ಎಸ್.ಎಸ್. ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ 22 ಬಡ ವಿದ್ಯಾರ್ಥಿಗಳಿಗೆ ದುಬೈನ ಕೊಡಗು ಹಳೇ ವಿದ್ಯಾರ್ಥಿ ಸಂಘ ಯು.ಎ.ಇ. ವತಿಯಿಂದ ಒಂದು ಲಕ್ಷ ರೂಪಾಯಿ ಪೆÇ್ರೀತ್ಸಾಹ ಧನವನ್ನು ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ವಕೀಲ ಪವನ್ ಪೆಮ್ಮಯ್ಯ ಮಾತನಾಡಿ, ಇಂದಿನ ಕೊರೊನಾ ಮಹಾಮಾರಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಪೆÇ್ರೀತ್ಸಾಹ ಧನವನ್ನು ನೀಡುತ್ತಿರುವ ದುಬೈ ಕೊಡಗು ಹಳೇ ವಿದ್ಯಾರ್ಥಿ ಸಂಘದ ಸೇವೆ ಶ್ಲಾಘಿನೀಯ ಎಂದರು. ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನ ವಿತರಿಸಿ ಮಾತನಾಡಿದ ಶಂಸುಲ್ ಉಲಮಾ ಹೆಣ್ಣು ಮಕ್ಕಳ ಅನಾಥಾಲಯ ಅಧ್ಯಕ್ಷ ಬಷೀರ್, ಶಿಕ್ಷಣವು ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಹಾಗೂ ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯು ವಂತಿರಬೇಕು ಎಂದರು.

ರಾಫಲ್ಸ್ ಇಂಟರ್‍ನ್ಯಾಷನಲ್ ವಿದ್ಯಾಸಂಸ್ಥೆಯ ಉಪ ಪ್ರಾಂಶುಪಾಲ ತನ್ವೀರ್ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯ ನಂತರ ಮುಂದೇನು ಎಂಬ ವಿಷಯದ ಕುರಿತಾಗಿ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮೆಹಬೂಬ್, ಶಿಕ್ಷಣದ ಮಹತ್ವ ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಗಳ ಕುರಿತಾಗಿ ತಿಳಿಸಿದರು.

ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಯಾನಾ ಸೋಮಯ್ಯ, ಮರ್ಕಜ್ ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್, ಕೊಡವ ಮುಸ್ಲಿಂ ಶಿಕ್ಷಣ ನಿಧಿ ಮುಖ್ಯಸ್ಥ ಹಂಸ, ಸೂಫಿ ಕುಂಡಂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.

ರಾಫಲ್ಸ್ ಇಂಟರ್‍ನ್ಯಾಷನಲ್ ಪಿ.ಯು. ಕಾಲೇಜಿನ ಉಪನ್ಯಾಸಕಿ ರೇಖಾ ಕಿಶೋರ್ ಸ್ವಾಗತಿಸಿ, ಅದಿತಿ ನಿರೂಪಿಸಿ, ವಾಣಿಜ್ಯ ವಿಭಾಗದ ಪೂಜಶ್ರೀ ವಂದಿಸಿದರು.