ವೀರಾಜಪೇಟೆ ವರದಿ, ಅ.30: ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಇಂದಿನವರೆಗೆ ಆರಂಭವಾಗಿಲ್ಲ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಸುರೇಶ್ ಭಟ್, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಡಾ.ಪಿ. ಬೊಳಕ್, ಡಾ. ಎಸ್.ವಿ. ಬಾದಾಮಿ, ಡಾ.ಎ.ಬಿ. ತಮ್ಮಯ್ಯ ಉಪಸ್ಥಿತರಿದ್ದು, ಅಕ್ಟೊಬರ್ 2ರಿಂದ ನವೆಂಬರ್ 15ರವರೆಗೆ ನಡೆಯಲಿದೆ. ಅದಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದರು.ಆದರೆ ಇದು ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ. ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮದಂತೆ ವೀರಾಜಪೇಟೆ ತಾಲೂಕಿನ (ಮೊದಲ ಪುಟದಿಂದ) ಹೆಗ್ಗಳ, ಬೇಟೋಳಿ, ಕದನೂರು, ವೀರಾಜ ಪೇಟೆನಗರ, ಆರ್ಜಿ, ಕೊಟ್ಟೋಳಿ, ಪಾಲಂಗಾಲ, ಬಾಳು ಗೊಡು, ಕೆದಮುಳ್ಳೂರು ಗ್ರಾಮಗಳಲ್ಲಿ ಲಸಿಕೆ ನೀಡಿರುವ ನಿದರ್ಶನಗಳಿಲ್ಲ. ನಿಗದಿತ ದಿನಾಂಕದಂತೆ ಬರಬಹುದೆಂದು 10 ರಾಸುಗಳನ್ನು ಮೇಯಲು ಬಿಡದೆ ಎರಡು ದಿನ ಕಾದರೂ ಯಾರೂ ಬರಲಿಲ್ಲ. ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಜೊತೆಗೆ ಕೊರೊನಾ ನೆಪವೊಡ್ಡ ಲಾಗುತ್ತಿದೆ. ಎಂದು ರೈತ ಮಹಿಳೆ ಸುನಿತಾ ದೂರಿದ್ದಾರೆ.

ಲಸಿಕೆ ನೀಡದಿದ್ದಲ್ಲಿ ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದೆ, ಗರ್ಭಪಾತ ಹಾಗೂ ಗರ್ಭಕಟ್ಟುವಲ್ಲಿ ವಿಳಂಬವಾಗುತ್ತದೆ ಅಲ್ಲದೆ ಕೆಲಸ ಮಾಡುವ ಎತ್ತು ಹೋರಿಗಳಲ್ಲಿ ಸಾಮಥ್ರ್ಯ ಕ್ಷೀಣವಾಗುವ ಸಾಧÀ್ಯತೆ ಇದೆ ಎಂದು ಜಾನುವಾರು ಮಾಲೀಕ ಅಚ್ಚಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. -ಪ್ರವೀಣ್