ಮಡಿಕೇರಿ, ಅ. 30: ಕಸ ಎಸೆದು ಊರಿಗೆ ತೆರಳುತ್ತಿದ್ದ ಕೆಲ ಪ್ರವಾಸಿಗರನ್ನು ಜಿಲ್ಲೆಗೆ ವಾಪಾಸ್ ಕರೆಸಿ ಅವರಿಂದಲೇ ಕಸವನ್ನು ಹೆಕ್ಕಿಸಿದ ಘಟನೆ ಮಡಿಕೇರಿ - ಚೆಟ್ಟಳ್ಳಿ ರಸ್ತೆಯಲ್ಲಿ ನಡೆದಿದೆ.

ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ತೆರಳುವ ಮಾರ್ಗ ಮಧ್ಯದಲ್ಲಿರುವÀ ಕೊಡಗು ವಿದ್ಯಾಲಯದ ಬಳಿ ಪ್ರವಾಸಿಗರು ತಾವು ಖರೀದಿಸಿ ತಂದಿದ್ದ ಫಿಜ್ಜಾವನ್ನು ತಮ್ಮ ವಾಹನದಲ್ಲೆ ಕುಳಿತು ತಿಂದು ನಂತರ ಅದರ ಬಾಕ್ಸ್ ಮತ್ತು ಕಸವನ್ನು ರಸ್ತೆಯಲ್ಲೆ ಸುರಿದು, ಅಲ್ಲಿಂದ ಮೈಸೂರು ಮಾರ್ಗವಾಗಿ ತೆರಳಿದ್ದರು. ಈ ಮಾರ್ಗವಾಗಿ ತೆರಳುತ್ತಿದ್ದ ಕಡಗದಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾದೇಟ್ಟಿರ ತಿಮ್ಮಯ್ಯ ಅವರು ಇದನ್ನು ಗಮನಿಸಿ ತಕ್ಷಣವೇ ಆ ಬಾಕ್ಸ್‍ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಫಿಜ್ಜಾ ಖರೀದಿದಾರನ ಹೆಸರು, ವಿಳಾಸ ಮತ್ತು ಫೆÇೀನ್ ನಂಬರ್ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಮಾದೇಟ್ಟಿರ ತಿಮ್ಮಯ್ಯ, ಸಾಮಾಜಿಕ ಜಾಲತಾಣದಲ್ಲಿ ಕಸದ ವೀಡಿಯೋ ಮಾಡಿ ಕಸ ಎಸೆದವರ ನಂಬರ್ ಪ್ರದರ್ಶಿಸಿ ಅವರಿಗೆ ಕರೆ

(ಮೊದಲ ಪುಟದಿಂದ) ಮಾಡಿದ್ದಲ್ಲದೆ ಕಸ ಹೆಕ್ಕಲು ವಾಪಾಸ್ ಬರುವಂತೆ ಪ್ರವಾಸಿಗರನ್ನು ಒತ್ತಾಯಿಸಲು ಸಾರ್ವಜನಿಕರಿಗೆ ಕರೆ ನೀಡಿದರು. ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರಿಗೂ ವಿಷಯ ತಿಳಿಸಿದ್ದು, ಅವರು ಕೂಡ ಪ್ರವಾಸಿಗರಿಗೆ ಕರೆ ಮಾಡಿದ್ದಾರೆ. ವೀಡಿಯೋವನ್ನು ವೀಕ್ಷಿಸಿದ ಹಲವು ಮಂದಿ ಕರೆ ಮಾಡಿದ್ದು ಒತ್ತಡಕ್ಕೆ ಮಣಿದು ಪಿರಿಯಾಪಟ್ಟಣ ಸಮೀಪದಲ್ಲಿದ್ದ ಪ್ರವಾಸಿಗರು ಜಿಲ್ಲೆಗೆ ಮರಳಿ ಕಸವನ್ನು ಹೆಕ್ಕಿದ್ದಾರೆ.

ಬಳಿಕ ತಿಮ್ಮಯ್ಯ ಫಿಜ್ಜಾ ಬಾಕ್ಸ್‍ಗಳ ಮೇಲೆ ಅವರೆಲ್ಲರ ಪೆÇೀನ್ ನಂಬರ್ ಬರೆಸಿದ್ದಾರೆ. ಇದರಿಂದ ಪ್ರವಾಸಿಗರು ಬೇರೆಡೆಯೂ ಕಸ ಹಾಕುವುದನ್ನು ತಪ್ಪಿಸಿದ್ದಾರೆ.

ಅಕ್ಷತಾ ಕೆ.ಕೆ. ಎಂಬವರ ಹೆಸರಲ್ಲಿ ಫಿಜ್ಜಾದ ಬಿಲ್ ಆಗಿದ್ದು, ಚಿರಾಗ್ ಎಂಬವರ ಮೊ.ಸಂಖ್ಯೆ ಬಿಲ್‍ನಲ್ಲಿ ಮುದ್ರಿತವಾಗಿತ್ತು.

ಕೆಲವು ದಿನಗಳ ಹಿಂದೆಯೂ ಕತ್ತಲೆಕಾಡು ವ್ಯಾಪ್ತಿಯಲ್ಲಿ ಮರಗೋಡಿನ ಗ್ಯಾರೇಜ್‍ವೊಂದರ ಮಾಲೀಕ ಗ್ಯಾರೇಜ್‍ನ ಕಸವನ್ನು ರಸ್ತೆ ಬದಿಯಲ್ಲಿ ಎಸೆದಿದ್ದರು. ಇದನ್ನು ಗಮನಿಸಿದ ತಿಮ್ಮಯ್ಯ ಅವರು ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಬಳಿಕ ಗ್ಯಾರೇಜ್‍ನ ಮಾಲೀಕನೇ ಸ್ವತಃ ಬಂದು ಶುಚಿಗೊಳಿಸಿದ ಘಟನೆ ನಡೆದಿತ್ತು.