ಮಡಿಕೇರಿ, ಅ. 30: ಶ್ರೀಮಂಗಲ ಪೆÇಲೀಸ್ ಠಾಣಾ ವ್ಯಾಪ್ತಿಯ ಪೂಕಳತೋಡು ಗ್ರಾಮದ ಮುರುಗೇಶ್ ಎಂಬವರ ತೋಟದಲ್ಲಿ ಹರಿಯುವ ಕಿರುಹೊಳೆಯಿಂದ ಮರಳು ತೆಗೆದು ಮಿನಿಲಾರಿಯಲ್ಲಿ ತುಂಬಿ ಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಡಿಸಿಐಬಿ ಪೆÇಲೀಸರು ಪತ್ತೆಹಚ್ಚಿದ್ದಾರೆ.ತಾ.27ರಂದು ರಾತ್ರಿ ಸಮಯದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಧಾಳಿ ನಡೆಸಿದ್ದು ಮುರುಗೇಶ್ ಅವರ ತೋಟದಲ್ಲಿ ಹರಿಯುವ ಕಿರುಹೊಳೆಯ ದಡದಲ್ಲಿ ಮರಳು ತುಂಬಿಸಿ ನಿಲ್ಲಿಸಲಾಗಿದ್ದ ಈಚರ್ ಮಿನಿ ಲಾರಿ (ಕೆಎ-12-ಬಿ 7576) ಹಾಗೂ ಮರಳು, ಜಾಗದ ಮಾಲೀಕ ಮುರುಗೇಶ್‍ನÀನ್ನು ವಶಕ್ಕೆ ಪಡೆಯಲಾಗಿದ್ದು, ಮಿನಿ ಲಾರಿ ಮಾಲೀಕ ನೆಲ್ಲಿರ ಉಮೇಶ್ ವಿರುದ್ದ ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ.ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ, ಮಾರ್ಗದರ್ಶನದಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ವಿ.ಜಿ ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್ ವಸಂತ, ಎಂ.ಎನ್ ನಿರಂಜನ್ ಮತ್ತು ಶ್ರೀಮಂಗಲ ಪೆÇಲೀಸ್ ಠಾಣೆಯ ಪಿ.ಎಸ್.ಐ. ಕರಿಬಸಪ್ಪ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.