ಮಡಿಕೇರಿ, ಅ. 29: ಕರ್ನಾಟಕ ಸಹಕಾರ ಸಂಘಗಳ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸಲು ಡಿಸೆಂಬರ್ 25ರ ತನಕ ಅವಧಿ ವಿಸ್ತರಿಸಲಾಗಿದೆ. ಈ ಹಿಂದೆ ವಾರ್ಷಿಕ ಸಭೆಯನ್ನು ಸೆಪ್ಟೆಂಬರ್ 25ರೊಳಗೆ ನಡೆಸಬೇಕಾಗಿ ಸರಕಾರ ಆದೇಶಿಸಿದ್ದು, ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಕಾರಣ ಇದನ್ನು ಸಡಿಲಿಸಿ ಇದೀಗ ಡಿಸೆಂಬರ್ 25ರೊಳಗೆ ಸಭೆ ನಡೆಸಲು ಅನುಮತಿ ನೀಡಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 121ರಡಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 27(1)ರಲ್ಲಿ ಸಹಕಾರ ಸಂಘಗಳ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ ಇಪ್ಪತ್ತೈದರೊಳಗಾಗಿ ನಡೆಸತಕ್ಕದ್ದು ಎಂಬುದನ್ನು ಸಡಿಲಿಸಿ, 25ನೇ ಡಿಸೆಂಬರ್ 2020ರೊಳಗಾಗಿ ನಡೆಸಲು ಆದೇಶಿಸಲಾಗಿದೆ.ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸಭೆ ನಡೆಸಲು ಡಿ.25ರ ತನಕ ಸಮಯ ನೀಡಲಾಗಿದ್ದು, ಕೋವಿಡ್ -19 ಕಾರಣ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ. ಕೋವಿಡ್ -19 ನಿರ್ವಹಣೆಗಾಗಿ ಹೊರಡಿಸಿದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಷರತ್ತು ಗಳಿಗೊಳಪಟ್ಟು ಸದಸ್ಯರ ಸಭೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು 2020ರ ಅವಧಿಗೆ ಮಾತ್ರ ಈ ಕೆಳಕಂಡ ನಿಬಂಧನೆಗೊಳಪಟ್ಟು ಅನುಮತಿ ನೀಡಲಾಗಿದೆ.

* ಸಭೆಯ ನೋಟೀಸು ಹಾಗೂ ಇನ್ನಿತರ ದಾಖಲಾತಿಗಳನ್ನು ಸಂಘದ ವೆಬ್‍ಸೈಟ್ ಮೂಲಕ ಪ್ರಚಾರ ಗೊಳಿಸುವುದು ಹಾಗೂ ಹಾಲಿ ಅನುಸ ರಿಸುತ್ತಿರುವ ಪದ್ಧತಿಯಂತೆ ನೋಟೀಸು ಗಳನ್ನು ಅಂಚೆಯ ಮೂಲಕ ರವಾನಿಸಲು ಸಹ ಕ್ರಮವಿಡತಕ್ಕದ್ದು.

* ಇ-ಮೇಲ್ ಅಥವಾ ವೆಬ್‍ಸೈಟ್ ಹೊಂದಿಲ್ಲದವರು ಖemoಣe

(ಮೊದಲ ಪುಟದಿಂದ) e-voಣiಟಿg sಥಿsಣem ಮೂಲಕ ಭಾಗವಹಿಸುವುದು.

* ಸದಸ್ಯರಿಗೆ ಡಿವಿಡೆಂಡ್‍ಗಳನ್ನು ಇಸಿಎಸ್ ಮೂಲಕ ಅವರುಗಳ ಖಾತೆಗೆ ಪಾವತಿಸಲು ಕ್ರಮವಿಡುವುದು.

* ಇಂತಹ ಸಭೆಯ ನಡವಳಿಕೆಗಳನ್ನು ಅಧಿಕೃತವಾಗಿ ರೆಕಾರ್ಡ್ ಮಾಡಿ ದಾಖಲಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳತಕ್ಕದ್ದು.

* ಸದಸ್ಯರ ಸಭೆ ನಡೆಸುವ ಸ್ಥಳದಲ್ಲಿ ಕೋವಿಡ್ -19ರ ನಿಯಮಾವಳಿಗಳಿಗೆ ಒಳಪಟ್ಟು ಎಂದಿನಂತೆ ಹಾಜರಾತಿಯನ್ನು ನಿರ್ವಹಿಸಿ ಸಹಕಾರ ಸಂಘಗಳ ಕಾಯ್ದೆ ಅನ್ವಯ ನಮೂದಿಸಿರುವ ಅಂಶಗಳನ್ನು ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡು ಹಾಲಿ ಪದ್ಧತಿಯಂತೆ ನಡಾವಳಿಗಳನ್ನು ನಡೆಸಲು ಕ್ರಮವಹಿಸಬೇಕು.

ಸರ್ವ ಸದಸ್ಯರ ಸಭೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ವ್ಯವಸ್ಥೆ ಇಲ್ಲದೇ ಇರುವಂತಹ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಸರ್ಕಾರದ ಆದೇಶ ಸಂಖ್ಯೆ: ಸಇ43ಸಿಎಲ್‍ಎಮ್ 2020(ಇ) ದಿನಾಂಕ :24.06.2020 ಹಾಗೂ ಸರ್ಕಾರದ ಆದೇಶ ಸಂಖ್ಯೆ:ಸಇ 44ಸಿಎಲ್‍ಎಮ್ 2020 (ಇ), ದಿನಾಂಕ :08.07.2020ರನ್ವಯ ಕ್ರಮ ಕೈಗೊಳ್ಳಲು ಕೆ.ಎಂ. ಆಶಾ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ ಅವರು ಆದೇಶಿಸಿದ್ದಾರೆ.