ವೀರಾಜಪೇಟೆ, ಅ. 29: ಪೌತಿಖಾತೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಇದ್ದರು ಕೂಡ ಕಂದಾಯ ಇಲಾಖೆÉಯಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಶಿರಸ್ತೇದಾರ್ ಸಂಜೀವ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪೌತಿ ಖಾತೆಗೆ ಸಂಬಂಧಿಸಿದಂತೆ ರೈತರ ಕಡತಗಳನ್ನು ಎಸೆಯುತ್ತಾರೆ ಎಂದು ಸ್ಥಳದಲ್ಲಿ ಇದ್ದ ರೈತರು ದೂರು ನೀಡಿದಾಗ ಶಿರಸ್ತೇದಾರ್ ಕಡತದ ಮೇಲಾಣೆ (ಮೊದಲ ಪುಟದಿಂದ) ದೇವರಾಣೆ ನಾನು ಕಡತವನ್ನು ಎಸೆಯಲಿಲ್ಲ ಎಂದು ಹೇಳಿದರು. ಸರ್ಕಾರದ ಸುತ್ತೋಲೆ ಯಾವ ರೀತಿಯಲ್ಲಿ ಬಂದಿದೆ ಅದರಂತೆ ನೀವು ಕೆಲಸ ನಿರ್ವಹಿಸಿ. ರೈತರಿಗೆ ಕಾನೂನಿನ ಬಗ್ಗೆ ತಿಳಿಹೇಳಿದ ಶಾಸಕರು ರೈತರಿಗೆ ಸಹಕಾರ ನೀಡದೆ ದರ್ಪದಿಂದ ವರ್ತಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯಿತ್ತರು.ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು ಪೌತಿ ಖಾತೆಯ ಬಗ್ಗೆ ಸರ್ಕಾರ ಅಕ್ಟೋಬರ್ 17ರಂದು ಸುತ್ತೋಲೆಯನ್ನು ಹೊರಡಿಸಿದೆ. ಪೌತಿ ಖಾತೆ ವಿಚಾರದಲ್ಲಿ ಶಿರಸ್ತೇದಾರ್ ಕಡತ ಎಸೆದು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನನಗೆ ದೂರು ಬಂದಿರುವ ಹಿನೆÀ್ನಲೆಯಲ್ಲಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಲಾಗಿದೆ. ಜಾಗ ನಮ್ಮ ಬಳಿ ಅನುಭವ ಸ್ವಾದೀನದಲ್ಲಿದ್ದು ಆರ್.ಟಿ.ಸಿ ಪಟ್ಟೆದಾರರ ಹೆಸರಿನಲ್ಲಿದ್ದರೆ ಅಂತಹ ಪ್ರಕರಣಗಳಿಗೆ ಸರ್ಕಾರ ಒಂದು ಕಾನೂನನ್ನು ರೂಪಿಸಿದೆ. ಆ ಕಾನೂನಿನ ಅನ್ವಯ ಪಟ್ಟೆದಾರರು ಮರಣ ಹೊಂದಿದ್ದಲ್ಲಿ ಅವರ ಮರಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳನ್ನು ಒದಗಿಸಿದಲ್ಲಿ ನಮ್ಮ ಹೆಸರಿನಲ್ಲಿ ಖಾತೆ ಮಾಡಿಸಿಕೊಳ್ಳಬಹುದು. ಈ ಪ್ರಕ್ರಿಯೆ ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು ಎಂದರು.
ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಮೂಕೋಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಅಪ್ಪಂಡೆರಂಡ ಭವ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಟ್ರಂಪಂಡ ರಘುನಾಣಯ್ಯ, ಬಿ.ಜೆ.ಪಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಜೋಕಿಂ ರಾಡ್ರಿಗಾಸ್, ತಹಶೀಲ್ದಾರ್ ಎಂ.ಎಲ್ ನಂದೀಶ್, ಪಟ್ಟಣ ಪಂಚಾಯಿತಿ ಮತ್ತಿತರರು ಉಪಸ್ಥಿತರಿದ್ದರು.