ಮಡಿಕೇರಿ, ಅ. 29: ಜಿಲ್ಲೆಯ ಶಾಫಿ ಮುಸ್ಲಿಂ ಬಾಂಧವರು ಈ ಬಾರಿಯ ಈದ್ ಮಿಲಾದ್ ಅನ್ನು ಕೋವಿಡ್ 19ರ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿದರು.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಮೂರು ತಾಲೂಕುಗಳ ಎಲ್ಲ ಶಾಫಿ ಮಸೀದಿಗಳಲ್ಲಿ ಇಂದು ಬೆಳಿಗ್ಗೆ ಮಹಮ್ಮದ್ ಪೈಗಂಬರರ ಗುಣಗಾನದ ಮೌಲಿದ್ ಪಾರಾಯಣ ನೆರವೇರಿತು .ಪ್ರವಾದಿ ವರ್ಯರು ಜಗಕ್ಕೆ ಸಾರಿದ ಒಳಿತಿನ ಸಂದೇಶಗಳ ಬಗ್ಗೆ ಈ ಸಂದರ್ಭದಲ್ಲಿ ಧರ್ಮ ಗುರುಗಳು, ನೆರೆದಿದ್ದ ಭಕ್ತರಿಗೆ ಮಾಹಿತಿ ಮಾಡಿಕೊಟ್ಟರು.ಕೋವಿಡ್ ನಿಯಮ ಪಾಲನೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಕಡಿಮೆ ಸಂಖ್ಯೆಯಲ್ಲಿ ಸಮುದಾಯದವರು ನೆರೆದಿದ್ದರು. ಕೆಲವು ಜಮಾತ್‍ಗಳಲ್ಲಿ ವಾಟ್ಸಾಪ್ ಗ್ರೂಪ್‍ಗಳ ಮೂಲಕ ಅರಬಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರವಾದಿ ಕುರಿv ಭಾಷಣ ಗಾಯನ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ದಿನದ ಅಂಗವಾಗಿ ಅನ್ನ ಸಂತರ್ಪಣಾ ಕಾರ್ಯ ನಡೆಯಿತು.ಮಾದಾಪುರದಲ್ಲಿ ಆಚರಣೆ : ಮಾದಾಪುರ ಮಾಹಿಯದ್ದೀನ್ ಜುಮಾ ಮಸ್ಜಿದ್‍ನಲ್ಲಿ ಕೋವಿಡ್ -19 ಆಗಿರುವುದರಿಂದ ಸರಳವಾಗಿ ಈದ್ ಮಿಲಾದ್ ಆಚರಿಸಲಾಯಿತು. ಜಮಾಅತ್ತಿನ ಖತೀಬರಾದ ಬಶೀರ್ ಸಖಾಫಿಯವರಿಂದ ಮೌಲೂದ್ ಪಾರಾಯಣ ಮಾಡಲಾಯಿತು.
(ಮೊದಲ ಪುಟದಿಂದ) ಜಮಾಅತ್ತಿನ ಅಧ್ಯಕ್ಷ ಅಬ್ದುಲ್ ಗಫಾರ್, ಕಾರ್ಯದರ್ಶಿ ಉಬೈ ದುಲ್ಲಾ, ಉಪಾಧ್ಯಕ್ಷ ಸೈಯದ್, ಮುಸ್ತಫ, .... ಮಾಜಿ ಗ್ರಾಮ ಪಂಚಾ ಯಿತಿ ಸದಸ್ಯರು ಗಳಾದ ಮಜೀದ್ ಎಂ.ಎ., ಇಬ್ರಾಹಿಂ ಸೀದಿ, ಮಾಜಿ ಅಧ್ಯಕ್ಷ ಎ.ಬಿ. ಉಮ್ಮರ್ ಹಾಗೂ ಜಮಾಅತ್ತಿನ ಸರ್ವ ಸದಸ್ಯರು ಹಾಜರಿದ್ದರು. ಮಧ್ಯಾಹ್ನ ಅನ್ನದಾನ ಮಾಡ ಲಾಯಿತು.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಆಚರಣೆ
ಸೋಮವಾರಪೇಟೆ : ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಂ ಸಮುದಾಯದವರು ಪವಿತ್ರ ಈದ್‍ಮಿಲಾದ್ ಹಬ್ಬವನ್ನು ಸರಳವಾಗಿ ಶ್ರದ್ಧಾಭಕ್ತಿಯೊಂದಿಗೆ ಆಚರಿಸಿದರು.
ಈವರೆಗೆ ಈದ್‍ಮಿಲಾದ್ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮದಿಂದ ಆಚರಿಸುತ್ತಿದ್ದ ಹಬ್ಬವನ್ನು ಈ ಬಾರಿ ಕೊರೊನಾ ವೈರಸ್ ಆತಂಕ ಹಾಗೂ ಸರ್ಕಾರದ ಮಾರ್ಗಸೂಚಿಗಳ ಹಿನ್ನೆಲೆ ಸರಳವಾಗಿ ಆಚರಿಸಿದರು.
ಈದ್‍ಮಿಲಾದ್ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಸೋಮವಾರಪೇಟೆಯ ಹನಫಿ ಜಾಮೀಯ, ಜಲಾಲಿಯಾ, ಬಜೆಗುಂಡಿಯ ಖಿಳಾರಿಯಾ, ಕಾಗಡಿಕಟ್ಟೆ, ತಣ್ಣೀರುಹಳ್ಳ, ಹೊಸತೋಟ, ಕಲ್ಕಂದೂರು, ಮಾದಾಪುರದ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು.
ಈ ಹಿಂದೆ ಈದ್ ದಿನದಂದು ಮಕ್ಕಳಿಗೆ ವಿಶೇಷ ಆಟೋಟಗಳು ಸೇರಿದಂತೆ ದಫ್ ಕಾರ್ಯಕ್ರಮಗಳನ್ನು ನಡೆಸಲಾಗುತಿತ್ತು. ಕೊರೊನಾ ಹಿನ್ನೆಲೆ ಈ ಬಾರಿಯ ಈದ್‍ಮಿಲಾದ್ ಹಬ್ಬವನ್ನು ಸರಳವಾಗಿ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಗಿದೆ ಎಂದು ಬಜೆಗುಂಡಿ ಖಿಳಾರಿಯಾ ಮಸೀದಿಯ ಅಧ್ಯಕ್ಷ ಕೆ.ಎ. ಯಾಕೂಬ್, ಹೊಸತೋಟ ಮಸೀದಿಯ ಸಲೀಂ ಅವರುಗಳು ತಿಳಿಸಿದರು.
ಹಳೇ ತಾಲೂಕುವಿನಲ್ಲಿ ಸರಳ ಈದ್ - ಮಿಲಾದ್ ಆಚರಣೆ
ನಾಪೆÇೀಕ್ಲು : ಸಮೀಪದ ಹಳೇತಾಲೂಕು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಕೊರೊನಾ ಕಾರಣದಿಂದ ಸರಳವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ನಡೆದ ಸರಳ ಸಮಾರಂಭದಲ್ಲಿ ಮಸೀದಿಯ ಖತೀಬರಾದ ಫೈಜಲ್ ಸಖಾಫಿ ಪ್ರವಾದಿ ಮಹಮ್ಮದ್ ಅವರ ಸಂದೇಶದಂತೆ ಎಲ್ಲರೂ ಜೀವನ ನಡೆಸಬೇಕು. ಎಲ್ಲರಲ್ಲಿಯೂ ಸಹೋದರತ್ವ ಕಾಣಬೇಕು. ಪ್ರತಿಯೊಬ್ಬರ ಕಷ್ಟವನ್ನು ತಮ್ಮ ಕಷ್ಟ ಎಂದು ತಿಳಿಯಬೇಕು. ಸಮಾಜದ ಶಾಂತಿ ನೆಮ್ಮದಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್.ಮಹಮ್ಮದ್ ಅಲಿ, ಕಾರ್ಯದರ್ಶಿ ಸಾದಿಕ್ ಅಲಿ, ಸದಸ್ಯರಾದ ಎಂ.ಪಿ. ಹಸೈನಾರ್, ಎ.ಹೆಚ್. ಇಬ್ರಾಹಿಂ, ಅಬೂಬಕ್ಕರ್, ಎಂ.ಎಸ್. ಇಬ್ರಾಹಿಂ, ಮತ್ತಿತರರು ಇದ್ದರು.