ನಾಪೋಕ್ಲು, ಅ. 29: ಸಮೀಪದ ಕಕ್ಕಬ್ಬೆಯ ಟ್ರ್ಯಾಂಗಲ್ ಶೂಟರ್ಸ್ ವತಿಯಿಂದ ನವೆಂಬರ್ 1ರಂದು ಕಕ್ಕಬ್ಬೆ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸ ಲಾಗುವುದು.0.22 ರೈಫಲ್ ಹಾಗೂ 12 ಬೋರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗೆ 9108005388 ಹಾಗೂ 9611490205 ಸಂಪರ್ಕ ಮಾಡಬಹುದಾಗಿದೆ.