ಗೋಣಿಕೊಪ್ಪಲು,ಅ.29: ತನ್ನ ಅಪ್ಪನ ಮನೆಯಿಂದಲೇ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಮಗನನ್ನು ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ಗಣಪತಿ ನಗರದ ತಮಿಳರ ಆರ್ಮುಗಂ ಅವರ ಮನೆ ಬಾಗಿಲನ್ನು ಮುರಿದ ಮಗ ಸತ್ಯ ಎಂಬಾತ ಮಿಕ್ಸಿ ಹಾಗೂ ಡಿವಿಡಿಯನ್ನು ಕಳವು ಮಾಡಿ ತಲೆ ಮರೆಸಿಕೊಂಡಿದ್ದ. ಈತನನ್ನು ಸಿದ್ದಾಪುರ ವ್ಯಾಪ್ತಿಯಲ್ಲಿ ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.