ಮಾಜಿ ಗೃಹ ಸಚಿವರ ಪುತ್ರನ ಬಂಧನ

ಬೆಂಗಳೂರು, ಅ.29 : ಮಾದಕ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ಬೆಂಗಳೂರು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಟನ್ ಪೇಟೆಯಲ್ಲಿ ದಾಖಲಾದ ಮಾದಕ ಜಾಲ ಪ್ರಕರಣದ ಪ್ರಮುಖ ಆರೋಪಿ ಅನೂಪ್ ನೊಂದಿಗೆ ಬಿನೇಶ್ ನಂಟು ಹೊಂದಿದ್ದು, ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆಯಲು ಬಿನೇಶ್ ಡ್ರಗ್ಸ್ ಪೆಡ್ಲರ್ ಅನೂಪ್ಗೆ 50 ಲಕ್ಷ ರೂ ಹಣಕಾಸಿನ ನೆರವು ನೀಡಿದ್ದರು. ಈ ಮಾಹಿತಿ ಆಧರಿಸಿ ಬೆಂಗಳೂರು ಇ ಡಿ ನೋಟಿಸ್ ನೀಡಿತ್ತು. ಹೀಗಾಗಿ ಅ. 6 ರಂದು ವಿಚಾರಣೆಗೆ ಹಾಜರಾಗಿ 6 ಗಂಟೆಗಳ ಕಾಲ ಬೀನೇಶ್ ವಿಚಾರಣೆ ಎದುರಿಸಿದ್ದು, ಈ ವೇಳೆ ಅನೂಪ್ಗೆ ಸ್ನೇಹಿತನ ಮೂಲಕ ಹಣ ಕೊಡಿಸಿದ್ದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದರು. ನಂತರ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಇ.ಡಿ ಅಧಿಕಾರಿಗಳು ಬೀನೇಶ್ ಅವರಿಗೆ ಸೂಚಿಸಿದ್ದರು. ಬಿನೇಶ್ ಇಂದು ಮತ್ತೆ ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಬಿನೇಶ್ ಅವರನ್ನು ಇಡಿ ವಶಕ್ಕೆ ಪಡೆಯಲಾಗಿದೆ.

ಆ್ಯಪ್ ಅಭಿವೃದ್ಧಿ ಪಡಿಸಿದ ಸೇನೆ

ನವದೆಹಲಿ, ಅ.29 : ದೇಶದಲ್ಲಿ ಸೈಬರ್ ಅಪರಾಧಗಳನ್ನು ತಗ್ಗಿಸುವ ದೃಷ್ಟಿಕೋನದಿಂದ ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಸೇನೆ ಅತ್ಯಂತ ಸುರಕ್ಷಿತ ಮೆಸೇಜಿಂಗ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಪ್ರಧಾನಿ ಮೋದಿ ಕನಸಿನ ಯೋಜನೆಗಳಲ್ಲಿ ಒಂದಾದ ‘ಆತ್ಮನಿರ್ಭರ ಭಾರತ್’ ಅನ್ವೇಷಣೆಯಲ್ಲಿ ಭಾರತೀಯ ಸೇನೆಯು ಆಂಡ್ರಾಯ್ಡ್ ಪ್ಲಾಟ್‍ಫಾರ್ಮ್‍ಗಾಗಿ ಸುರಕ್ಷಿತ ಧ್ವನಿ, ಪಠ್ಯ ಮತ್ತು ವಿಡಿಯೋ ಕರೆ ಸೇವೆಗಳನ್ನು ಬೆಂಬಲಿಸುವ ವಿಶೇಷ ಆ್ಯಪ್ ವೊಂದನ್ನು ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ Seಛಿuಡಿe ಂಠಿಠಿಟiಛಿಚಿಣioಟಿ ಜಿoಡಿ ಣhe Iಟಿಣeಡಿಟಿeಣ (SಂI) ಸಾಯಿ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಗುರುವಾರ ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ವಾಟ್ಸಾಪ್, ಟೆಲಿಗ್ರಾಮ್, ಸ್ಯಾಮ್ವಾಡ್ ಮತ್ತು ಜಿಮ್ಸ್ ನಂತಹ ಮೆಸೇಜಿಂಗ್ ಆ್ಯಪ್ ಗಳ ರೀತಿಯಲ್ಲೇ ಈ ಸಾಯಿ ಕೂಡ ಕಾರ್ಯ ನಿರ್ವಹಿಸಲಿದೆ. ಎಂಡ್-ಟು-ಎಂಡ್ ಎನ್‍ಕ್ರಿಪ್ಶನ್ ಮೆಸೇಜಿಂಗ್ ಪೆÇ್ರಟೊಕಾಲ್ ಅನ್ನು ಬಳಕೆ ಮಾಡುವುದರಿಂದ ಇದರಲ್ಲಿನ ಎಲ್ಲ ರೀತಿಯ ದತ್ತಾಂಶಗಳು ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಸ್ಥಳೀಯ ಆಂತರಿಕ ಸರ್ವರ್‍ಗಳು ಮತ್ತು ಕೋಡಿಂಗ್‍ನೊಂದಿಗೆ ಸುರಕ್ಷತಾ ವೈಶಿಷ್ಟ್ಯಗಳ ಮೇಲೆ ಸಾಯಿ ಕಾರ್ಯನಿರ್ವಹಿಸಲಿದೆ. ಈ ವಿಶಿಷ್ಟ ಆ್ಯಪ್ ನ್ನು ಸಿಇಆರ್ಟಿ-ಇನ್ ಎಂಪಾನಲ್ಡ್ ಆಡಿಟರ್ ಮತ್ತು ಆರ್ಮಿ ಸೈಬರ್ ಗ್ರೂಪ್ ಪರಿಶೀಲಿಸಿದೆ ಎಂದು ಹೇಳಿರುವ ರಕ್ಷಣಾ ಸಚಿವಾಲಯ ಶೀಘ್ರದಲ್ಲೇ ಈ ಆ್ಯಪ್‍ನ ಐಒಎಸ್ ಅವತರಣಿಕೆಯನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ. ಈ ಸಂಬಂಧ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದೆ.

ಸಿಲಿಂಡರ್ ಬುಕಿಂಗ್ : ಒಂದೇ ಸಂಖ್ಯೆಯ ಸೇವೆ

ಬೆಂಗಳೂರು, ಅ.29 : ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಸಿಲಿಂಡರ್ ಬುಕಿಂಗ್ ಗೆ 7718955555 ಆಗಿದ್ದು, ಗ್ರಾಹಕರಿಗೆ ಈ ಸೇವೆ 24ಘಿ7 ಲಭ್ಯವಿರುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಎಲ್.ಪಿ.ಜಿ. ಬುಕ್ಕಿಂಗ್ ನ್ನು ಒಂದೇ ಸಂಖ್ಯೆಯಲ್ಲಿ -ಎಸ್.ಎಂ.ಎಸ್. ಮತ್ತು ಐವಿಆರ್.ಎಸ್.- ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್ ಎಲ್.ಪಿ.ಜಿ. ಮರುಪೂರಣ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲತೆ ಹೆಚ್ಚಿಸುವ ಮಹತ್ವದ ಕ್ರಮವಾಗಿದೆ. ಇದರಿಂದಾಗಿ ಗ್ರಾಹಕರು ಒಂದು ದೂರಸಂಪರ್ಕ ವೃತ್ತದಿಂದ ಮತ್ತೊಂದಕ್ಕೆ, ಅಥವಾ ಯಾವುದೇ ರಾಜ್ಯಕ್ಕೆ ಹೋದರೂ, ಅವರ ಇಂಡೇನ್ ಮರುಪೂರಣ ಸಿಲಿಂಡರ್ ಬುಕಿಂಗ್ ಸಂಖ್ಯೆ ಒಂದೇ ಆಗಿರುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಇಂಡೇನ್ ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು, ಇದು 31.10.2020ರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗಲಿದೆ ಮತ್ತು ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಸಮಾನ ಸಂಖ್ಯೆ ಅಂದರೆ 7718955555, ಜಾರಿಗೆ ಬರುತ್ತದೆ.

ಪ್ರವಾದಿ ನಿಂದನೆ ಆರೋಪ : ಫ್ರಾನ್ಸ್ ಉದ್ವಿಗ್ನ

ಪ್ಯಾರಿಸ್, ಅ.29 : ಮೆಡಿಟರೇನಿಯನ್ ಸಿಟಿಯ ಚರ್ಚ್ ಬಳಿ ಆಗಂತುಕನೊಬ್ಬ ಚೂರಿಯಿಂದ ಹಲವರ ಮೇಲೆ ದಾಳಿ ನಡೆಸಿ ಮಹಿಳೆಯ ಶಿರಚ್ಛೇಧ ಮಾಡಿದ್ದಾನೆ. ಇನ್ನಿಬ್ಬರು ಚೂರಿ ಇರಿತದಿಂದ ಮೃತಪಟ್ಟಿದ್ದಾರೆ. ದಾಳಿಯ ಕುರಿತಂತೆ ಫ್ರೆಂಚ್ ಭಯೋತ್ಪಾದನೆ ವಿರೋಧಿ ಅಭಿಯೋಜಕರರು ತನಿಖೆ ಕೈಗೊಂಡಿದ್ದಾರೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. ಅಲ್ಲದೆ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರು ಪ್ರವಾದಿ ಮೊಹಮ್ಮದ್ ರ ವ್ಯಂಗ್ಯಚಿತ್ರ ಪ್ರದರ್ಶನ ನಿಲ್ಲಿಸುವುದಿಲ್ಲ ಎಂದು ದೇಶದ ಮುಂದೆ ಪ್ರತಿಜ್ಞೆ ಮಾಡಿದ್ದರು.

ಕಲ್ಯಾಣ್ ದಾಂಪತ್ಯ ವಿವಾದ : ಮಹಿಳೆ ಸಾವು

ಕೊಪ್ಪಳ, ಅ.29 : ಸ್ಯಾಂಡಲ್ ವುಡ್ ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಹುಳಿ ಹಿಂಡಿದ ಆರೋಪ ಎದುರಿಸುತ್ತಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಪತ್ತೆಯಾಗಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮರಾಠಿ ಭಾಷೆಯಲ್ಲಿ ಗಂಗಾ ಕುಲಕರ್ಣಿ ಡೆತ್ನೋ ಟ್ ಬರೆದಿಟ್ಟು, ನ್ಯಾಯಾಧೀಶರು ಹಾಗೂ ವಕೀಲರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ. ನನ್ನ ಮೇಲೆ ಪ್ರಕರಣಗಳು ದಾಖಲಾಗಿವೆ. ನನಗೆ ಇಬ್ಬರೂ ಮಕ್ಕಳಿದ್ದಾರೆ. ನನ್ನ ಮಕ್ಕಳನ್ನು ನೀವೇ ನೋಡಿಕೊಳ್ಳಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ನನ್ನ ಮಕ್ಕಳ ಜವಾಬ್ದಾರಿ ನಿಮ್ಮದು ಎಂದು ನ್ಯಾಯಾಧೀಶರು ಮತ್ತು ವಕೀಲರಿಗೆ ಮನವಿ ಮಾಡಿದ್ದಾರೆ. ಇಂದು ವಿಷ ಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಭಾರತದ ಕ್ಷಮೆ ಕೋರಿದ ಟ್ವಿಟರ್ ಸಂಸ್ಥೆ

ನವದೆಹಲಿ ಅ.29 : ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ. ಈ ಕುರಿತಂತೆ ಭಾರತದ ಜಂಟಿ ಸಂಸದೀಯ ಸಮಿತಿಗೆ ಟ್ವಿಟರ್ ಸಂಸ್ಥೆಯ ವಕ್ತಾರರು ಮೌಖಿಕ ಕ್ಷಮೆಯಾಚಿಸಿದ್ದು, ಲಿಖಿತ ಉತ್ತರದಲ್ಲಿ ಈ ಕ್ಷಮೆ ಕೋರಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಟ್ವಿಟ್ಟರ್ ವಕ್ತಾರರು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ದೇಶದ ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಅಂತೆಯೇ ಟ್ವಿಟರ್ ವಕ್ತಾರರು ಸಲ್ಲಿಕೆ ಮಾಡಿರುವ ಈ ಪತ್ರವನ್ನು ಜಂಟಿ ಸಂಸದೀಯ ಸಮಿತಿ ಸ್ವೀಕರಿಸಿದೆ. ಈ ಹಿಂದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿತ್ತು. ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ಕೂಡ ನೀಡಿತ್ತು.

ನ.1 ರಿಂದ ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಅ.29 : ದೇಶದಲ್ಲಿ ನೈರುತ್ಯ ಮುಂಗಾರು ಮಳೆಯ ಅವಧಿ ಅರ್ಭಟ, ಮುಗಿದರೂ ನ.1 ರಿಂದ ರಾಜ್ಯದ ಹಲವು ಭಾಗಗಳಲ್ಲಿ ಈಶಾನ್ಯ ಮಾರುತಗಳ ಕಾರಣ ಹಿಂಗಾರಿನಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೆ ಭಾರೀ ಮಳೆಯಿಂದಾಗಿ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಈ ಬಾರಿಯ ಹಿಂಗಾರು ಮಳೆ ತಡವಾಗಿ ಅಂದರೆ ಅಕ್ಟೋಬರ್ 28 ರಿಂದ ಆರಂಭವಾಗಿದೆ. ಮುಂಗಾರಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದೀಗ ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲೇ ಹೆಚ್ಚು ಪ್ರಭಾವ ಬೀರುವ ಹಿಂಗಾರು ಮಳೆ ನಿನ್ನೆಯಿಂದ ಆರಂಭವಾಗಿದೆ. ನ.1 ರ ಹೊತ್ತಿಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿರಲಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.