ಕರಿಕೆ, ಅ. 28: ಮಳೆಗಾಲ ಬಂತೆಂದರೆ ಕೊಡಗಿನಲ್ಲಿ ಅನೇಕ ಜಲಪಾತಗಳು ನಯನ ಮನೋಹರವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಂತಹ ಕೆಲವು ಜಲಪಾತಗಳಲ್ಲಿ ಭಾಗಮಂಡಲ-ಕರಿಕೆ ರಸ್ತೆ ಬದಿಯ ತಲಕಾವೇರಿ ಅಭಯಾರಣ್ಯದ ಹದಿನೈದು ಕಿ.ಮೀ. ಉದ್ದದ ರಸ್ತೆಯ ಉದ್ದಕ್ಕೂ ಸುಮಾರು ಇಪ್ಪತ್ತಕ್ಕೂ ಅಧಿಕ ಜಲಪಾತಗಳು ಕಾಣ ಸಿಗುತ್ತವೆ. ಪ್ರಯಾಣಿಕರು ಬಸ್, ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವಾಗ ಇದರ ಸೌಂದರ್ಯವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಕೆಲವು ಜಲಪಾತಗಳು ವರ್ಷಪೂರ್ತಿ ಹರಿದರೆ, ಉಳಿದವು ಜನವರಿ ತನಕ ತಮ್ಮ ಜಲ ವೈಭವವನ್ನು ಹೊರಜಗತ್ತಿಗೆ ತೋರಿಸುತ್ತವೆ.

ಕೊಡಗಿಗೆ ಆಗಮಿಸುವ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಇದರ ಸೊಬಗನ್ನು ಸವಿಯುತಿದ್ದು, ಇದೀಗ ಕೆಲ ದಿನಗಳಿಂದ ಮಳೆ ಪ್ರಮಾಣ ಹೆಚ್ಚಾದ ಕಾರಣ ಮತ್ತೆ ಈ ಜಲ ಧಾರೆಗಳು ಮೈದುಂಬಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.

- ಸುಧೀರ್ ಹೊದ್ದೆಟ್ಟಿ