ಕುಶಾಲನಗರ, ಅ. 28: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಂದಾಜು ಎರಡು ವರ್ಷದಿಂದ ಪ್ರಾರಂಭಗೊಂಡ ಚರಂಡಿ ಕಾಮಗಾರಿಯೊಂದು ಇನ್ನೂ ಪೂರ್ಣಗೊಳ್ಳದೆ ಕಲುಷಿತ ತ್ಯಾಜ್ಯಗಳು ತುಂಬಿ ತುಳುಕುವುದ ರೊಂದಿಗೆ ಇಡೀ ಪ್ರದೇಶ ವಾಸನಾಮಯವಾಗಿರುವ ದೃಶ್ಯ ಜಿಲ್ಲೆಯ ಗಡಿಭಾಗ ಕುಶಾಲನಗರ ದಲ್ಲಿ ಕಾಣಬಹುದು.
ಕುಶಾಲನಗರದಿಂದ ಮೈಸೂರು ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಮೂಲಕ ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ಮೈಸೂರು ರಸ್ತೆಯ ಬದಿಯಲ್ಲಿ ಅಂದಾಜು 18 ಲಕ್ಷ ರೂ ವೆಚ್ಚದಲ್ಲಿ 200 ಮೀಟರ್ ಉದ್ದಕ್ಕೆ ಚರಂಡಿ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಈ ಚರಂಡಿಯಲ್ಲಿ ಹೆದ್ದಾರಿ ರಸ್ತೆ ಬದಿಯ ಕೆಲವು ವಾಣಿಜ್ಯ ಕಟ್ಟಡ ಗಳಿಂದ ಕಲುಷಿತ ನೀರು ವ್ಯಾಪಕ ವಾಗಿ ಹರಿಸುತ್ತಿರುವ ಕಾರಣ ನದಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ತ್ಯಾಜ್ಯವನ್ನು ಸಂಸ್ಕರಿಸಿ ನದಿಗೆ ಹರಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ಸ್ಥಳೀಯ ಸ್ವಚ್ಛತಾ ಅಭಿಯಾನದ ಪ್ರಮುಖರು ಒತ್ತಾಯಿಸಿದ್ದರು.
ಈ ಸಂದರ್ಭ ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕುಶಾಲನಗರ ಪಪಂ ಅಧಿಕಾರಿಗಳಿಗೆ ಉದ್ದಕ್ಕೆ ಚರಂಡಿ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಈ ಚರಂಡಿಯಲ್ಲಿ ಹೆದ್ದಾರಿ ರಸ್ತೆ ಬದಿಯ ಕೆಲವು ವಾಣಿಜ್ಯ ಕಟ್ಟಡ ಗಳಿಂದ ಕಲುಷಿತ ನೀರು ವ್ಯಾಪಕ ವಾಗಿ ಹರಿಸುತ್ತಿರುವ ಕಾರಣ ನದಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ತ್ಯಾಜ್ಯವನ್ನು ಸಂಸ್ಕರಿಸಿ ನದಿಗೆ ಹರಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ಸ್ಥಳೀಯ ಸ್ವಚ್ಛತಾ ಅಭಿಯಾನದ ಪ್ರಮುಖರು ಒತ್ತಾಯಿಸಿದ್ದರು.
ಈ ಸಂದರ್ಭ ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕುಶಾಲನಗರ ಪಪಂ ಅಧಿಕಾರಿಗಳಿಗೆ ಉದ್ದಕ್ಕೆ ಚರಂಡಿ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಈ ಚರಂಡಿಯಲ್ಲಿ ಹೆದ್ದಾರಿ ರಸ್ತೆ ಬದಿಯ ಕೆಲವು ವಾಣಿಜ್ಯ ಕಟ್ಟಡ ಗಳಿಂದ ಕಲುಷಿತ ನೀರು ವ್ಯಾಪಕ ವಾಗಿ ಹರಿಸುತ್ತಿರುವ ಕಾರಣ ನದಿಗೆ ಸೇರುವುದನ್ನು ತಪ್ಪಿಸುವ ಸಲುವಾಗಿ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ತ್ಯಾಜ್ಯವನ್ನು ಸಂಸ್ಕರಿಸಿ ನದಿಗೆ ಹರಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ಸ್ಥಳೀಯ ಸ್ವಚ್ಛತಾ ಅಭಿಯಾನದ ಪ್ರಮುಖರು ಒತ್ತಾಯಿಸಿದ್ದರು.
ಈ ಸಂದರ್ಭ ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕುಶಾಲನಗರ ಪಪಂ ಅಧಿಕಾರಿಗಳಿಗೆ ದಿನನಿತ್ಯ ನಿರಂತರವಾಗಿ ಚರಂಡಿ ಮೂಲಕ ಮೇಲ್ಭಾಗದಿಂದ ಸಾವಿರಾರು ಲೀಟರ್ ಪ್ರಮಾಣದ ಕಲುಷಿತ ತ್ಯಾಜ್ಯ ಹರಿಸುತ್ತಿರುವ ಕಾರಣ ಈ ಪ್ರದೇಶದಲ್ಲಿ ತುಂಬಿ ವಾಸನೆಯೊಂದಿಗೆ ಇಲ್ಲಿನ ವಾಣಿಜ್ಯ ಕೇಂದ್ರಗಳಿಗೆ ಭಾರೀ ತೊಂದರೆ ಉಂಟಾಗುತ್ತಿರುವುದು ಬೆಳವಣಿಗೆ ಯಾಗಿದೆ. ಕೊಡಗು ಜಿಲ್ಲೆಗೆ ಆಗಮಿಸುವ ಗಣ್ಯರು, ಅತಿ ಗಣ್ಯರನ್ನು ಬರಮಾಡಿಕೊಳ್ಳುವ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಈ ದೃಶ್ಯ ಕಣ್ಣಿಗೆ ರಾಚುವಂತೆ ಕಂಡುಬಂದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಕೊಡಗಿನ ಹೆಬ್ಬಾಗಿಲಲ್ಲಿ ಈ ರೀತಿಯ ಅಶುಚಿತ್ವ ತಾಂಡವವಾಡುತ್ತಿರುವುದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಜಾಣ ಮೌನ ವಹಿಸುತ್ತಿರುವುದು ಮಾತ್ರ ಖಂಡನೀಯ. ಚರಂಡಿಯಲ್ಲಿ 2 ರಿಂದ 3 ಅಡಿ ಕಲುಷಿತ ನೀರು ತುಂಬಿದ್ದು ಅಕಸ್ಮಾತ್ ಮಕ್ಕಳು, ವೃದ್ದರು ಜಾರಿ ಬಿದ್ದಲ್ಲಿ ಭಾರೀ ಅನಾಹುತ ಉಂಟಾಗುವುದು ಖಚಿತ. ಜೊತೆಗೆ ಈ ಸುತ್ತಮುತ್ತ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಯಿ ದ್ದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ.
ಈ ಹಿಂದೆ ತುಂಬಿ ಹರಿಯುವ ಚರಂಡಿಯಿಂದ ಪಂಚಾಯ್ತಿ ಸಕ್ಕಿಂಗ್ ಯಂತ್ರದ ಮೂಲಕ ನಿತ್ಯ 30 ರಿಂದ 40 ಸಾವಿರ ಲೀಟರ್ ಪ್ರಮಾಣದ ಕಲುಷಿತ ನೀರನ್ನು ತೆರವುಗೊಳಿಸಲು ಸತತವಾಗಿ ಕ್ರಮಕೈಗೊಂಡಿತ್ತು. ಭಾರೀ ಪ್ರಮಾಣದ ಕೊಳಚೆ ನೀರು ಹರಿಯುತ್ತಿರುವ ಹಿನ್ನಲೆ ಕೆಳಭಾಗ ದಲ್ಲಿರುವ ಹೊಟೇಲ್ ಒಂದರ ಆವರಣದ ಮುಂಭಾಗದಲ್ಲಿ ವಾಸನೆಯಿಂದ ತಿರುಗಾಡಲು ಆಗದೆ ಸಮಸ್ಯೆ ಸೃಷ್ಠಿಯಾಗಿದೆ. ಲಾಕ್‍ಡೌನ್ ಸಂದರ್ಭ ಈ ಚರಂಡಿ ಬಹುತೇಕ ಸ್ವಚ್ಛವಾಗಿದದ್ದು ಕಂಡುಬಂದಿತ್ತು. ಇದೀಗ ಮತ್ತೆ ವಾಣಿಜ್ಯ ಚಟುವಟಿಕೆ ಗಳು ಗರಿಗೆದರಿದಂತೆ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ತುಳುಕುತ್ತಿದೆ.
ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೂ ಯಾವುದೇ ಶಾಶ್ವತ ಕ್ರಮ ನಡೆಯದೆ ಕೊಡಗಿನ ಹೆಬ್ಬಾಗಿಲ ವ್ಯಾಪ್ತಿ ಮಾತ್ರ ವಾಸನಾಮಯವಾಗಿ ಪರಿವರ್ತನೆ ಗೊಂಡಿರುವುದು ನಿಜಕ್ಕೂ ವಿಷಾದನೀಯ ಎನ್ನುತ್ತಾರೆ ಸ್ಥಳೀಯ ನಾಗರೀಕರು.
ತಮ್ಮ ಹೋಟೆಲ್‍ಗೆ ಬರುವ ಪ್ರವಾಸಿಗರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಸೃಷ್ಠಿಯಾಗಿದೆ. ತಕ್ಷಣ ತಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕೆಂದು ಹೋಟೆಲ್ ಮಾಲೀಕ ಬಾಲಕೃಷ್ಣ ಅವರು ಮನವಿ ಮಾಡಿದ್ದಾರೆ.
ಕಲುಷಿತ ನೀರಿನ ಸಮರ್ಪಕ ವಿಲೇವಾರಿಗೆ ಘಟಕ ನಿರ್ಮಾಣಕ್ಕೆ ಕ್ರಿಯಾ ಯೋಜನೆ ನಿರ್ಮಿಸ ಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿ ವರ್ಷವೇ ಕಳೆದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕೂಡಲೆ ಚರಂಡಿಯಲ್ಲಿ ಕಲುಷಿತ ನೀರು ಹರಿಸುವುದನ್ನು ತಪ್ಪಿಸುವುದ ರೊಂದಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿ ಕಲುಷಿತ ನೀರನ್ನು ಶುದ್ಧೀಕರಿಸಿ ನಂತರ ವಿಲೇವಾರಿ ಮಾಡಲು ಪಪಂ ಸೂಕ್ತ ಕ್ರಮಕೈಗೊಳ್ಳ ಬೇಕಾಗಿದೆ.
- ಎಂ. ಎನ್. ಚಂದ್ರಮೋಹನ್