ಸುಂಟಿಕೊಪ್ಪ, ಅ. 28: ಇಲ್ಲಿನ ಸುತ್ತಮುತ್ತಲಿನ ಶಿವ ದೇವಾಲಯಗಳಲ್ಲಿ ಸೋಮವಾರ ವಿಜಯ ದಶಮಿಯ ಪ್ರಯುಕ್ತ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದವು.
ಕೊಡಗರಹಳ್ಳಿ ಬೈತೂರಪ್ಪ ಈಶ್ವರ ದೇವಾಲಯದಲ್ಲಿ ವಿಜಯ ದಶಮಿಯ ಪ್ರಯುಕ್ತ ಚಂಡಿಕಾ ಹೋಮ, ಲಲಿತಾ ಸಹಸ್ರಾನಾಮ, ಕಂಕುಮಾರ್ಚಣೆ ನಡೆಯಿತು. ಮೈಸೂರಿನ ಅರ್ಚಕರಾದ ಜಯಂತ್ ಭಟ್, ಮಂಜುನಾಥ ಭಟ್, ಬಾನುಪ್ರಕಾಶ್ ಭಟ್ ದಿನz ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಸುಂಟಿಕೊಪ್ಪ, ನಾಕೂರು, ಹೊಸಕೋಟೆ, ಕೊಡಗರಹಳ್ಳಿ ಅಂದಗೋವೆ, ಶಾಂತಗೇರಿ, ಕಂಬಿಬಾಣೆ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡರು. ಮಧ್ಯಾಹ್ನ ಮಹಾಮಂಗಳಾರತಿ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ದೇವಾಲಯದ ಸಮಿತಿ ಅಧ್ಯಕ್ಷ ಸದಸ್ಯರು ಹಾಜರಿದ್ದರು.