ಪೆÇನ್ನಂಪೇಟೆ, ಅ. 28: ಗೋಣಿಕೊಪ್ಪಲು ವಿಶ್ವಕರ್ಮ ಸೇವಾ ಸಮಿತಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮಿತಿಯ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಕಾಲೇಜು ಶುಲ್ಕ ಕಟ್ಟಲು ಧನಸಹಾಯ ಮಾಡಲಾಯಿತು. ಸುರೇಂದ್ರ ಹಾಗೂ ಪ್ರಿಯ ದಂಪತಿಯ ಪುತ್ರ ಕವನ್, ಬಿರುನಾಣಿ ಗ್ರಾಮದ ಕರುಣಾಕರ ಹಾಗೂ ಸರಸ್ವತಿ ದಂಪತಿಯ ಪುತ್ರಿ ಮೌನ ಅವರಿಗೆ ಸಮಿತಿಯ ವತಿಯಿಂದ 5 ಸಾವಿರ ರೂ. ಚೆಕ್ ವಿತರಿಸಲಾಯಿತು. ಹಿಂದೂ ಮಲೆಯಾಳಿ ಸಂಘದ ಕಟ್ಟಡದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಕೆ.ಎ. ವಿನೋದ್, ಕಾರ್ಯದರ್ಶಿ ಎ. ಎ. ರಾಘವ, ಗೌರವ ಅಧ್ಯಕ್ಷ ಟಿ. ಸಿ. ಪ್ರಭಾಕರ್, ಆಡಳಿತ ಮಂಡಳಿ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.