ಚೆಟ್ಟಳ್ಳಿ, ಅ. 28 : ಚೆಟ್ಟಳ್ಳಿ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ವಾಲ್ನೂರು ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಸದಸ್ಯರ ಕಚೇರಿಯಲ್ಲಿ ನಡೆಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಅವರ ಅಧÀ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯ ಬಗ್ಗೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಲಾಯಿತು. ಸಭೆಯಲ್ಲಿ ಜಿ. ಪಂ. ಸದಸ್ಯರಾದ ಸುನೀತಾ ಮಂಜುನಾಥ್, ಮಾಜಿ ಮಂಡಲ ಅಧ್ಯಕ್ಷರಾದ ತೀರ್ಥ ಕುಮಾರ್, ಪಕ್ಷದ ಕಾರ್ಯದರ್ಶಿ ಝುಬೇರ್, ಮಾಜಿ ಪಂಚಾಯಿತಿ ಸದಸ್ಯರಾದ ಮೋಹಮೆದ್ ರಫೀಕ್, ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನು ಕಾಫಿ ಬೋರ್ಡ್ ಮತ್ತು ಎಲ್ಲಾ ವಾರ್ಡಿನ ಕಾರ್ಯಕರ್ತರು ಹಾಜರಿದ್ದರು.