ಚೆಟ್ಟಳ್ಳಿ, ಅ. 28: ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾರ್ಥಿ ಸಂಸ್ಥೆಯಾದ ಅನ್ವಾರುಲ್ ಹುದಾ ಇದರ ಸಂತತಿಗಳ ಸಂಗಮ ವೀರಾಜಪೇಟೆ ಅನ್ವಾರ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಹಿರಿಯ ಮುದ್ರಿಸರಾದ ಇಸ್ಮಾಯಿಲ್ ಸಖಾಫಿ ಉಸ್ತಾದ್ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು.

ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ ಸ್ವಾಗತ ಕೋರಿದರು. ಸಂಸ್ಥೆಯ ಪ್ರಾಂಶುಪಾಲ ರಶೀದ್ ಸಅದಿ ಉಸ್ತಾದ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ಪ್ರಧಾನ ಕಾರ್ಯದರ್ಶಿಯೂ ಸಂಸ್ಥೆಯ ಪ್ರಾಧ್ಯಾಪಕರೂ ಆದ ಯಾಕೂಬ್ ಮಾಸ್ಟರ್ ಕೊಳಕೇರಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶಕೀರ್ ಮಾಸ್ಟರ್ ಪೆÇನ್ನತ್ಮೊಟ್ಟೆ, ಇಬ್ರಾಹಿಂ ಮಾಸ್ಟರ್ ಕೊಂಡಂಗೇರಿ ಅನ್ವಾರಿ ಗಳಿಗೆ ಹಿತವಚನ ನೀಡಿದರು. ಅನ್ವಾರಿಗಳ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಸಂಸ್ಥೆಯ ಸಾರಥಿ ಶೈಖುನಾ ಅಹ್ಸನಿ ಉಸ್ತಾದ್ ಮಾರ್ಗದರ್ಶನವನ್ನು ನೀಡಿದರು.

ಸಅದಿ, ಅಹ್ಸನಿ ಸ್ನಾತಕೋತ್ತರ ಪದವಿ ಪಡೆದ ಅನ್ವಾರಿ ಯುವ ಪಂಡಿತರಿಗೆ ಸನ್ಮಾನಿಸಲಾಯಿತು. ಬರಹ ರಂಗದಲ್ಲಿ ಹೊಸ ಹುಮ್ಮಸ್ಸನ್ನು ಸೃಷ್ಟಿ ಮಾಡುತ್ತಿರುವ ವಾಯ್ಸ್ ಆಫ್ ಅನ್ವಾರಿ 500 ಸಂಚಿಕೆ ಪೂರ್ಣ ಗೊಳಿಸಿದ ಬರಹಗಾರ ಶಾಫಿ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿರವರನ್ನು ಸಂಸ್ಥೆಯ ಸಾರಥಿ ಅಹ್ಸನಿ ಉಸ್ತಾದ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅನ್ವಾರುಲ್ ಹುದಾ ನೂತನ ವರ್ಷದ ಕ್ಯಾಲೆಂಡರ್ ಸಯ್ಯದ್ ಸಮೀಹ್ ಎಮ್ಮೆಮಾಡು ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದ ನಿರೂಪಣೆ ಯನ್ನು ಸಂಘಟನಾ ಅಧ್ಯಕ್ಷ ರಿಯಾಸ್ ಅನ್ವಾರಿ ಅಸ್ಸಅದಿ ಹೊಸತೋಟ ನಿರ್ವಹಿಸಿದರು. ಕಾರ್ಯದರ್ಶಿ ರಾಶಿದ್ ಅನ್ವಾರಿ ಅಲ್ ಅಹ್ಸನಿ ಅಯ್ಯಂಗೇರಿ ಇದ್ದರು.