ನಾಪೋಕ್ಲು, ಅ. 28: ನಾಪೋಕ್ಲು ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿಶೇಷವಾಗಿ ಆಯುಧಪೂಜೆ ಕಾರ್ಯಕ್ರಮ ನಡೆಸಿದರು. ಸದಾ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವ ಪೊಲೀಸರು ಉತ್ಸವದ ಅಂಗವಾಗಿ ಶ್ವೇತವಸ್ತ್ರ ಧರಿಸಿ ಆಯುಧಪೂಜೆ-ವಿಜಯದಶಮಿ ಆಚರಿಸಿದರು.