*ಗೋಣಿಕೊಪ್ಪಲು, ಅ. 27: ಕೊಡಗಿನಲ್ಲಿ ಹೈನುಗಾರಿಕೆ ಬಗ್ಗೆ ಬೆಳೆಗಾರರು ಆಸಕ್ತಿ ತೋರುತ್ತಿರುವುದು ಶ್ಲಾಘನೀಯ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ತುಷಾರ್ ಕುಲಕರ್ಣಿ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಹೈನುಗಾರಿಕೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಕಳೆದ ಹಲವು ವರ್ಷಗಳಿಂದ ಹೈನುಗಾರಿಕೆ ಬಗ್ಗೆ ರೈತಾಪಿ ವರ್ಗ ನಿರ್ಲಕ್ಷ್ಯ ತಾಳಿದ್ದರು. ಸಾಲ ಸೌಲಭ್ಯ, ಸಬ್ಸಿಡಿ ಇದೆ ಎಂದರೂ ರಾಸು ಸಾಕಾಣೆ ಬಗ್ಗೆ ಉತ್ಸಾಹ ತೋರದೆ ಮೌನ ವಹಿಸಿದ್ದರು. ಆದರೆ, ಗೋಣಿ ಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ 5 ದಿನಗಳಿಂದ ಜರುಗಿದ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಾಗಾರದಲ್ಲಿ 250ಕ್ಕೂ ಅಧಿಕ ಆಕಾಂಕ್ಷಿಗಳು ಜಿಲ್ಲೆಯ ವಿವಿಧ ಗ್ರಾಮಗಳಿಂದ ಪಾಲ್ಗೊಂಡಿದ್ದುದು ಹೊಸ ಆಶಾಭಾವನೆ ಮೂಡಿಸಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಹೈನುಗಾರಿಕೆ ಉದ್ಯಮ ಚೇತರಿಕೆಯ ನಿಟ್ಟಿನಲ್ಲಿದೆ. ಕಳೆದ ಸಾಲಿನಲ್ಲಿ ಬ್ಯಾಂಕುಗಳು ಹೈನು ಗಾರಿಕೆಗಾಗಿ ರೂ. 2.75 ಕೋಟಿ ಸಾಲ ಸೌಲಭ್ಯ ನೀಡಿದೆ. ಎರಡು ಹಸುಗಳನ್ನು ಕೊಳ್ಳಲು ಓರ್ವ ಕೃಷಿಕರಿಗೆ ರೂ. 1.50 ಲಕ್ಷ ಸಾಲ ನೀಡಲಾಗುತ್ತದೆ. ಶೇ. 25 ಸಬ್ಸಿಡಿ ಇದ್ದು, 10 ರಾಸುಗಳನ್ನು ಸಾಕು ವವರಿಗೆ ಮತ್ತು ಕೊಟ್ಟಿಗೆ ನಿರ್ಮಾಣ ಕ್ಕಾಗಿ ರೂ. 7 ಲಕ್ಷದವರೆಗೂ ಸಾಲ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರತಿನಿತ್ಯ 6 ಸಾವಿರ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟ ವಾಗುತ್ತಿದೆ. ಹಾಲು ಸಂಗ್ರಹ ಹಾಗೂ ವಿತರಣೆ ವ್ಯವಸ್ಥೆ ಸರಿಪಡಿಸಿದರೆ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು. ಪೆÇನ್ನಂಪೇಟೆಯಲ್ಲಿ ಸ್ಥಗಿತ ಗೊಂಡಿರುವ ಹಾಲು ಶೀತಲ ಘಟಕ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೊಡಗು ಕಾವೇರಿ ಹಾಲು ಉತ್ಪಾದಕರ ಸಂಘದೊಂದಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ. ಪೂರ್ವಜರು ಜಿಲ್ಲೆಯಲ್ಲಿ ಗೋಮಾಳ, ಗೋವುಗಳ ಸಾಕಾಣಿಕೆಯ ಅಗತ್ಯವನ್ನು ಗುರುತಿಸಿ ಸುಮಾರು 38 ಸಾವಿರ ಎಕರೆ ಗೋಮಾಳಕ್ಕಾಗಿ ಜಾಗ ಮೀಸಲಿ ರಿಸಿದ್ದರು. ಇದೀಗ ಎಲ್ಲವೂ ಒತ್ತುವರಿ ಯಾಗಿದ್ದು ಕೇವಲ 18 ಸಾವಿರ ಎಕರೆ ಗೋಮಾಳ ಬಾಕಿ ಉಳಿದಿದೆ ಎಂದು ವಿಷಾದಿಸಿದರು. ಕೊಡಗು ಕಾವೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುರುವಂಡ ಕಸ್ತೂರಿ ಸುಬ್ಬಯ್ಯ ಅಧ್ಯಕ್ಷತೆ ವಹಿಸಿ ದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸುರೇಶ್, ಯುವ ಉದ್ಯಮಿ ಚಂದನ್ ಕಾಮತ್ ಹಾಜರಿ ದ್ದರು. ಸೇವಾ ಭಾರತಿ ಜಿಲ್ಲಾಧ್ಯಕ್ಷ ಟಿ.ಸಿ. ಚಂದ್ರನ್ ಅವರ ನೇತೃತ್ವದಲ್ಲಿ 65 ಮಂದಿ ಪಾಲ್ಗೊಂಡಿದ್ದರು.