ವೀರಾಜಪೇಟೆ, ಅ. 27: ವೀರಾಜಪೇಟೆ ಬಳಿಯ ಐಮಂಗಲದಲ್ಲಿ ಚೆಂಬೆಬೆಳ್ಳೂರು-ಐಮಂಗಲ ಲಿಂಕ್ನ ಕಾಂಕ್ರಿಟ್ರಸ್ತೆಯನ್ನು ಉದ್ಘಾಟಿಸಿದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಳೆಗಾಲ ಪೂರ್ಣವಾಗಿ ಸ್ಥಗಿತಗೊಂಡ ನಂತರ ಇದೇ ವಿಭಾಗದಲ್ಲಿ ವಿಶೇಷ ಪ್ಯಾಕೇಜ್ ನಡಿಯಲ್ಲಿ ರೂ. 30 ಲಕ್ಷದ ಜನಪರ ಕಾಮಗಾರಿ ರೂ. 8 ಲಕ್ಷದ ಮಳೆಹಾನಿ ಪರಿಹಾರದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗುವುದು. ಮೋರಿ, ಚರಂಡಿ ಕಾಮಗಾರಿಗೆ ಜಾಗದ ಮಾಲೀಕರು ಜಾಗ ತೆರವು ಮಾಡಿ ಸಹಕರಿಸಬೇಕೆಂದೂ ಹೇಳಿದರು. ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರ ಕೈಗೊಳ್ಳುವ ಕಾಮಗಾರಿಗಳಿಗೆ ಗ್ರಾಮಸ್ಥರು ಪರಸ್ಪರ ಸಹಕರಿಸುವಂತೆ ಕೋರಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಶಶಿ ಸುಬ್ರಮಣಿ, ಬಿಜೆಪಿಯ ತಾಲೂಕು ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ರಘು ನಾಣಯ್ಯ, ಚೆಂಬೆಬೆಳ್ಳೂರು ಶಕ್ತಿ ಕೇಂದ್ರದ ಅಧ್ಯಕ್ಷ ಚಾರಿಮಂಡ ಭಾನು ಬೋಪಣ್ಣ, ಐಮಂಗಲ ಬೂತ್ ಸಮಿತಿ ಅಧ್ಯಕ್ಷ ಮೇಕತಂಡ ತಿಮ್ಮಯ್ಯ, ಚೆಂಬೆಬೆಳ್ಳೂರು ಬೂತ್ ಸಮಿತಿ ಅಧ್ಯಕ್ಷ ಮಾಚಪಂಡ ಕಿರು, ಐಮಂಗಲ ದೇವಾಲಯ ಸಮಿತಿ ಅಧ್ಯಕ್ಷ ಬೊಳ್ಳಚಂಡ ಪ್ರಕಾಶ್, ಕಾರ್ಯದರ್ಶಿ ಕುಂಡ್ರಂಡ ದೇವಯ್ಯ, ಹಿರಿಯರಾದ ಚಾರಿಮಂಡ ನಾಚಪ್ಪ, ರವಿ, ಬೊಳ್ಳಚಂಡ ಕಾಳಪ್ಪ, ಇಲಾಖೆಯ ಸಹಾಯಕ ಅಭಿಯಂತರರು, ಗ್ರಾಮದ ಪ್ರಮುಖರು ಹಾಜರಿದ್ದರು.