ವೀರಾಜಪೇಟೆ, ಅ. 27: ಸರದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
‘‘ಏಕತಾ ಹರಿಕಾರ ಸರದಾರ ವಲ್ಲಭಬಾಯಿ ಪಟೇಲರ ಜೀವನ ಮತ್ತು ಸಮಗ್ರ ವ್ಯಕ್ತಿತ್ವ’’ ಅಥವಾ ‘‘ಭಾರತದಲ್ಲಿ ಏಕತಾ ದಿವಸದ ಕಲ್ಪನೆ ಏನು? ಸಾಕಾರ ಹೇಗೆ?’’ ವಿಷಯದ ಕುರಿತು ಪ್ರಬಂಧ ರಚಿಸಬೇಕು. 1500 ಪದಗಳ ಮಿತಿಯಲ್ಲಿರಬೇಕು. ಕಾಲೇಜಿನ ಗುರುತಿನ ಚೀಟಿ ಕಡ್ಡಾಯವಾಗಿ ಲಗತ್ತಿಸಬೇಕು. ಹೆಸರು, ಸಂಪೂರ್ಣ ವಿಳಾಸದೊಂದಿಗೆ ಕೈ ಬರಹದಲ್ಲಿ ಬರೆದ ಪ್ರಬಂಧವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿದೆ.
ಪ್ರಬಂಧ ಕಳುಹಿಸಲು ಕೊನೆಯ ದಿನ ತಾ. 30. ವಿಳಾಸ: ಸಂಚಾಲಕರು, ಸುಜಾತ ಆರ್., ಸಹಾಯಕ ಪ್ರಾಧ್ಯಾಪಕರು, ಪ್ರೊ. ಬಿ.ವಿ. ರಮಣ, ಸಾಹಿತ್ಯ ಸಂಘ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ, ವೀರಾಜಪೇಟೆ, ಕೊಡಗು -571218, ಮೊ. 9900881423, 8904392744.