ವೀರಾಜಪೇಟೆ ವರದಿ, ಅ. 27: ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸ್ವಮಿತ್ವ ಯೋಜನೆಯ ಅನುಷ್ಠಾನದ ಗ್ರಾಮ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹೆಚ್. ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆದಮುಳ್ಳೂರು ಪಂಚಾಯಿತಿ ಆಡಳಿತಾಧಿಕಾರಿ ಮಾತನಾಡಿ ಮನೆ ಕಂದಾಯ ಪರಿಷ್ಕರಣೆ ಹಾಗೂ ಸ್ವಮಿತ್ವ ಯೋಜನೆಯ ಅನುಷ್ಠಾನದ ಅರಿವು ಮೂಡಿಸಲು ಗ್ರಾಮ ಸಭೆಗಳಿಂದ ಸಾಧÀ್ಯ. ಗ್ರಾಮಸ್ಥರು ಪ್ರತಿ ವರ್ಷ ಮನೆ ಕಂದಾಯ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.