ಮಡಿಕೇರಿ, ಅ. 27: ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತ ಉತ್ತಾರಾಧಿಗಳ ಹೆಸರಿಗೆ ಬದಲಾವಣೆಯಾಗದಿದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ದಿ ಪಡಿಸಲು ಸಾಲ ಸೌಕರ್ಯ, ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ ಪರಿಹಾರದ ಮೊಬಲಗನ್ನು ಪಡೆಯಲು ಉಂಟಾಗುವ ಸಮಸ್ಯೆ ಹಾಗೂ ಸರ್ಕಾರದ ಇನ್ನಿತರ ಸೌಲಭ್ಯವನ್ನು ಪಡೆಯಲು ಆಗುವ ತೊಂದರೆಗಳನ್ನು ಪರಿಹರಿಸಲು ಪೌತಿ/ ವಾರಸಾ ಸ್ವರೂಪದ ಮ್ಯುಟೇಶನ್ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಿ ಪೌತಿ/ವಾರಸಾ ಮಡಿಕೇರಿ, ಅ. 27: ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತ ಉತ್ತಾರಾಧಿಗಳ ಹೆಸರಿಗೆ ಬದಲಾವಣೆಯಾಗದಿದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ದಿ ಪಡಿಸಲು ಸಾಲ ಸೌಕರ್ಯ, ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ ಪರಿಹಾರದ ಮೊಬಲಗನ್ನು ಪಡೆಯಲು ಉಂಟಾಗುವ ಸಮಸ್ಯೆ ಹಾಗೂ ಸರ್ಕಾರದ ಇನ್ನಿತರ ಸೌಲಭ್ಯವನ್ನು ಪಡೆಯಲು ಆಗುವ ತೊಂದರೆಗಳನ್ನು ಪರಿಹರಿಸಲು ಪೌತಿ/ ವಾರಸಾ ಸ್ವರೂಪದ ಮ್ಯುಟೇಶನ್ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಿ ಪೌತಿ/ವಾರಸಾ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಲು ಮ್ಯುಟೇಶನ್ ಪ್ರಕ್ರಿಯೆಯನ್ನು
(ಮೊದಲ ಪುಟದಿಂದ) ಸರಳೀಕೃತಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ತಾ. 27 ರಿಂದ ಪೌತಿ ಖಾತೆ ಬದಲಾವಣೆ ಆಂದೋಲವನ್ನು ಹಮ್ಮಿಕೊಂಡಿದ್ದು, ಸಂಬಂಧಪಟ್ಟ ಗ್ರಾಮದ ಗ್ರಾಮಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ರೈತಾಪಿ ವರ್ಗದವರು/ ಸಾರ್ವಜನಿಕರು ಪೌತಿ/ ವಾರಸುದಾರಿಕೆಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ/ ಮನವಿ ಸಲ್ಲಿಸಿ ಈ ಆಂದೋಲನದ ಯಶಸ್ವಿಗೆ ಸಹಕರಿಸಬೇಕಾಗಿ ಕೋರಿದೆ.
ಒದಗಿಸಬೇಕಾದ ದಾಖಲೆಗಳು: ನಮೂನೆ 1ರಲ್ಲಿ ಪೌತಿ/ ವಾರಸಾ ಖಾತೆ ಮಾಡಿಕೊಡುವ ಕುರಿತು ಅರ್ಜಿ, ಖಾತೆದಾರರು ಮೃತರಾಗಿರುವ ಸರ್ವೆ ನಂಬರ್‍ಗಳ ಪಹಣಿ (ಆರ್‍ಟಿಸಿ), ಮೃತರ ಮರಣದ ಸಮರ್ಥನೆ ಪತ್ರ, ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್, ನಮೂನೆ-1ರ ಅರ್ಜಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್ ತಿತಿತಿ.ಞoಜಚಿgu.ಟಿiಛಿ.iಟಿನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.