ಮಡಿಕೇರಿ, ಅ. 27: ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 2 ವೆಂಟಿಲೇಟರ್‍ನ್ನು ಕೊಡುಗೆಯಾಗಿ ನೀಡಲಾಯಿತು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕ್‍ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಕಾರ್ಯಪ್ಪ ಮತ್ತು ಪ್ರಾಂಶುಪಾಲ ಡಾ.ವಿಶಾಲ್ ಅವರಿಗೆ 6.50 ಲಕ್ಷ ರೂ.ಮೌಲ್ಯದ ವೆಂಟಿಲೇಟರ್‍ಗಳನ್ನು ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಕೊಡಂದೇರ ಪಿ.ಗಣಪತಿ ಅವರು ಸಾರ್ವಜನಿಕರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ವೆಂಟಿಲೇಟರ್‍ಗಳನ್ನು ನೀಡಲಾಗಿದ್ದು, ಇದನ್ನು ಸದುಪಯೋಗ ಪಡಿಸಿ ಕೊಳ್ಳುವಂತೆ ಮನವಿ ಮಾಡಿದರು.

ಉಪಾಧ್ಯಕ್ಷ ಕೇಟೋಳಿರ ಪೂವಯ್ಯ, ನಿರ್ದೇಶಕ ಬಿ.ಕೆ. ಚಿಣ್ಣಪ್ಪ, ಪಟ್ರಪಂಡ ಬಿ.ರಘು ನಾಣಯ್ಯ, ಹೊಟ್ಟೆಂಗಡ ಎಂ.ರಮೇಶ್, ಕನ್ನಂಡ ಎ.ಸಂಪತ್, ಎಸ್.ಬಿ. ಭರತ್ ಕುಮಾರ್,

(ಮೊದಲ ಪುಟದಿಂದ) ಕೋಲತಂಡ ಎ. ಸುಬ್ರಮಣಿ, ಕಿಮ್ಮುಡೀರ ಎ. ಜಗದೀಶ್, ಉಷಾ ತೇಜಸ್ವಿನಿ, ಎ. ಗೋಪಾಲಕೃಷ್ಣ, ಅಪ್ಪಚಟ್ಟೋಳಂಡ ಕೆ.ಮನು ಮುತ್ತಪ್ಪ, ಕೆ.ಅರುಣ್ ಭೀಮಯ್ಯ, ಹೊಸೂರು ಜೆ. ಸತೀಶ್ ಕುಮಾರ್, ಬಿ.ಡಿ ಮಂಜುನಾಥ್, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಇತರರು ಇದ್ದರು.