ವೀರಾಜಪೇಟೆ, ಅ. 27: ಕೊಡಗಿನಲ್ಲಿ ಸೌಹಾರ್ದತೆ, ಶಾಂತಿ, ಸಹಬಾಳ್ವೆ, ಸಾಮರಸ್ಯ ಜೀವನಕ್ಕೆ ಕಾವೇರಿ ಮಾತೆ ಆಶೀರ್ವದಿಸಲಿ. ಜಿಲ್ಲೆಯ ಪ್ರತಿಯೊಬ್ಬರು ಅನ್ಯೋನ್ಯತೆಯಿಂದ ಪರಸ್ಪರ ಸಹಕಾರದಿಂದ ಬಾಳಲು ಮಾತೆ ಕಾವೇರಿಯ ಕೃಪಾ ಕಟಾಕ್ಷವಿರಲಿ. ಎಲ್ಲರೂ ಒಮ್ಮತದಿಂದ ಬದುಕು ಮುಂದುವರೆಸೋಣ ಎಂದು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಅಭಿಪ್ರಾಯಪಟ್ಟರು.ವೀರಾಜಪೇಟೆಯ ಕೊಡವ ಸಮಾಜದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿದ ಪವಿತ್ರ ಕಾವೇರಿ ಮಾತೆಯ ತೀರ್ಥ ಪೂಜೆಯ ಅಂಗವಾಗಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಣಯ್ಯ ಅವರು, ಇಂದು ಸರ್ವ ಧರ್ಮೀಯರು ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲು ಮೂಡಬೇಕು. ಇದರಿಂದ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮುಲ್ಲೆಂಗಡ (ಮೊದಲ ಪುಟದಿಂದ) ಶಂಕರಿ ಪೊನ್ನಪ್ಪ ಮಾತನಾಡಿ, ಕೊಡವ ಜನಾಂಗದ ಪರಂಪರೆ ಸಂಸ್ಕøತಿ ಪದ್ಧತಿಯನ್ನು ಸಂಘಟನೆಗಳನ್ನು ಮುಂದಿನ ಪೀಳಿಗೆಯ ಯುವ ಜನಾಂಗಕ್ಕೂ ಪರಿಚಯಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದರು.
ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಮಾಳೇಟಿರ ನಂಜಪ್ಪ ಮಾತನಾಡಿ, ಶಾಂತಿ, ನೆಮ್ಮದಿ, ಸೌಹಾರ್ದತೆ ಪ್ರತಿಯೊಬ್ಬರಲ್ಲು ಮೂಡಿಬರಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕುಯ್ಮಂಡ ಜೆ. ಕಿರಣ್, ಕಾರ್ಯದರ್ಶಿ ಕುಲ್ಲಚಂಡ ಎಂ. ಪೂಣಚ್ಚ, ಮರಣ ನಿಧಿ ಕಾರ್ಯದರ್ಶಿ ಅಲ್ಲಪಂಡ ಎಂ ಚಿಣ್ಣಪ್ಪ, ಆಟೋಟ ಕಾರ್ಯದರ್ಶಿ ಕನ್ನಂಬೀರ ಡಿ. ಚಿಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ವೀರಾಜಪೇಟೆ ಕೊಡವ ಸಮಾಜದ ಏಳು ಕೇರಿಗಳ ಅಧ್ಯಕ್ಷರು ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ತ್ರಿವೇಣಿ ಪ್ರೌಢಶಾಲಾ ಆಡಳಿತ ಮಂಡಳಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕಾಂತಿ ಸತೀಶ್, ಕಾರ್ಯ ದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಪದಾಧಿಕಾರಿಗಳು ಹಾಜರಿದ್ದರು. ಸಭೆಗೆ ಮೊದಲು ತಲಕಾವೇರಿ ಯಿಂದ ತಂದಿದ್ದ ಕಾವೇರಿ ತೀರ್ಥಕ್ಕೆ ಸಾಂಪ್ರದಾಯಿಕ ಬದ್ಧವಾಗಿ ವಿಧಿ ವಿಧಾನಗಳ ಪ್ರಕಾರ ಪೂಜಾ ಸೇವೆ ಸಲ್ಲಿಸಲಾಯಿತು.