ವೀರಾಜಪೇಟೆ, ಅ. 27: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕೆ.ಜಿ. ವೀಣಾ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಸಲುವಾಗಿ, ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಹಿರಿಯ ಪ್ರಾಧ್ಯಾಪಕರಾದ ಡಾ. ಆನಂದ್ ಕಾರ್ಲ, ಪ್ರೊ. ಶಂಕರ್ ನಾರಾಯಣ್ ಹಾಗೂ ಕಚೇರಿ ಅಧೀಕ್ಷಕಿ ಡಿ.ಎಂ. ಲತಾಕುಮಾರಿ ಹಾಜರಿದ್ದರು. ಡಾ. ಕೆ.ಜಿ. ವೀಣಾ ತಮ್ಮ ಸಂಶೋಧನಾ ಕೃತಿಯನ್ನು ಕಾಲೇಜಿನ ಗ್ರಂಥಾಲಯಕ್ಕೆ ಈ ಸಂದರ್ಭ ನೀಡಿದರು.