ಮಡಿಕೇರಿ, ಅ. 27: ಇದೇ ಮೊದಲ ಬಾರಿಗೆ ಸೂರ್ಯನ ಕಿರಣಗಳು ತಗಲುವ ಚಂದ್ರನ ನೆಲದಲ್ಲಿ ನೀರಿನ ಅಂಶ ಪತ್ತೆಯಾಗಿದೆ. ಸೂರ್ಯಕಿರಣ ರಹಿತ ಪ್ರದೇಶದಲ್ಲಿ ಈ ಹಿಂದೆ ಮಂಜುಗಡ್ಡೆಯ ರೂಪದಲ್ಲಿ ನೀರು ಪತ್ತೆಯಾಗಿದ್ದು ಚಂದ್ರನ ಅತ್ಯಂತ ಚಳಿ ಹಾಗೂ ಕತ್ತಲೆಯ ಪ್ರದೇಶಗಳಲ್ಲಿ ಮಾತ್ರ ನೀರು ಇರಬಹುದು ಎಂಬದಾಗಿ ಊಹಿಸಲಾಗಿತ್ತು. ಆದರೆ ಇದೀಗ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ಓಂSಂ, SಔಈIಂ ಎಂಬ ಬಾಹ್ಯಾಕಾಶ ವಿಮಾನದ ಟೆಲಿಸ್ಕೋಪ್ ಮೂಲಕ ಸೂರ್ಯ ಕಿರಣ ತಗಲುವ ಚಂದ್ರನ ಪ್ರದೇಶದಲ್ಲಿಯೂ ನೀರು ಇರುವದನ್ನು ಖಚಿತಪಡಿಸಿದೆ. SಔಈIಂ ತನ್ನ ಟೆಲಿಸ್ಕೋಪ್ ಮೂಲಕ ಸಂಶೋಧನೆ ನಡೆಸಿದಾಗ. ಚಂದ್ರನ ನೆಲದ ಮಣ್ಣಿನ ಅಡಿಯಲ್ಲಿ ಸಣ್ಣ ನೀರಿನ ಅಂಶವನ್ನು SಔಈIಂ ಪತ್ತೆ ಹಚ್ಚಿದೆ.ಹಲವು ವರ್ಷಗಳ ಹಿಂದಿನಿಂದಲೂ ಚಂದ್ರಲೋಕದಲ್ಲಿ ನೀರಿನ ಅಂಶವಿ ರುವುದು ಸಂಶೋಧನೆಗಳ ಮೂಲಕ ತಿಳಿದುಬಂದಿತ್ತು.