ಕೂಡಿಗೆ, ಅ. 24: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಂತರ್ಜಾಲ ಮೂಲಕ ದಸರಾ ಕವಿಗೋಷ್ಠಿ ನಡೆಯಿತು. ಕೂಡಿಗೆಯ ತೀರ್ಥಕುಮಾರ್ ಅವರ ಮನೆಯ ಸಭಾಂಗಣದಲ್ಲಿ ಉದ್ಘಾಟನೆ ನೆರವೇರಿತು.
ಕೊರೊನಾದಿಂದಾಗಿ ಈ ಬಾರಿ ದಸರಾ ಕವಿಗೋಷ್ಠಿ ರದ್ದಾಗಿರುವ ಹಿನ್ನೆಲೆಯಲ್ಲಿ ಕವಿಗಳಿಗೆ ತಮ್ಮ ಮನಸ್ಸುಗಳ ಕಲರವವನ್ನು ಹೊರ ಹಾಕಲು ಸಾಹಿತ್ಯ ಪರಿಷತ್ ಸಕಾಲದಲ್ಲಿ ಅಂತರರ್ಜಾಲದ ಮುಖಾಂತರ ಕವಿಗೋಷ್ಠಿಯನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿವೆ ಹಿರಿಯ ಸಾಹಿತಿ ಭಾರಧ್ವಾಜ್ ಕೆ. ಆನಂದತೀರ್ಥ ನೆರವೇರಿಸಿ ಮಾತನಾಡುತ್ತಾ ಕೊಡಗಿನಲ್ಲಿ ಸಾಹಿತಿಗಳಿಗೆ, ಕವಿಗಳಿಗೆ ಸೂಕ್ತ ವೇದಿಕೆಯ ಬರವೇನೂ ಇಲ್ಲ; ಆದರೆ ಪ್ರಚಾರಕ್ಕೆ ಇಷ್ಟಪಡದ ಕವಿಗಳಿಗೆ ಸೂಕ್ತ ವೇದಿಕೆಯ ಅವಶ್ಯಕತೆ ಮತ್ತು ಪ್ರಬುದ್ಧ ಸಾಹಿತಿಗಳಿಂದ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯ ಮತ್ತು ಸಂಸ್ಕøತಿಗೆ ಹೆಚ್ಚಿನ ಆದÀ್ಯತೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಯ ಕವಿಗಳಿಗೆ ಕಾವ್ಯ ಕಮ್ಮಟ ಸೇರಿದಂತೆ ಸಾಹಿತ್ಯಾತ್ಮಕ ತರಬೇತಿಯನ್ನು ಯುವ ಬರಹಗಾರರಿಗೆ ಖ್ಯಾತ ಸಾಹಿತಿಗಳ ಮುಖಾಂತರ ಅಂತರ್ಜಾಲ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ ಜಿಲ್ಲೆಯ 40 ಕವಿಗಳು ಭಾಗವಹಿಸಿ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜವರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ. ತಾಲೂಕು ಕಾರ್ಯದರ್ಶಿ ಲೋಕೇಶ್, ಕವಿಗೋಷ್ಠಿ ಸಂಚಾಲಕ ತೀರ್ಥ ಕುಮಾರ್, ರಾಜು, ಮಹೇಶ್ ಭಾಗವಹಿಸಿದ್ದರು. ಅಂತರ್ಜಾಲ ಮೂಲಕ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಎಸ್.ಎ. ಮುರುಳೀಧರ್ ಪ್ರಾರ್ಥಿಸಿದರೆ, ತೀರ್ಥ ಕುಮಾರ ವಂದಿಸಿದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದವರು
ಅಲ್ಲಾರಂಡ ವಿಠಲ, ಬಿ.ಜಿ. ಅನಂತಶಯನ, ಶರ್ಮಿಳಾ ರಮೇಶ್, ರುಬೀನ, ರಾಣಿರವೀಂದ್ರ, ವಸಂತಿ ರವೀಂದ್ರ, ಕೊಟ್ಟಕೇರಿಯನ ಲೀಲಾ ದಯಾನಂದ, ಡಾ. ಕಾವೇರಿ ಪ್ರಕಾಶ್, ಮಿಲನ ಭರತ್, ಸುಲೇಮಾನ್, ವೈಲೇಶ್, ಹೇಮಲತ, ಹರೀಶ್ ಸರಳಾಯ, ಕೇಡನ ಪ್ರಗತಿ, ಜಶ್ಮಿ ಮೂರ್ನಾಡ್, ಉಳುವಂಗಡ ಕಾವೇರಿ ಉದಯ, ರಜತ್ ರಾಜ್, ವೀಣಾ ರಾವ್, ಕೃಪಾ ದೇವರಾಜ್, ಸುಮನ್ ಸೀತಮ್ಮ, ರಶ್ಮಿ ನಿತಿನ್, ಎಲ್.ಎಮ್. ಪ್ರೇಮ, ಕವಿತಾ ಕೊಡ್ಲಿಪೇಟೆ, ಸತೀಶ್ ಕೊಡ್ಲೀಪೇಟೆ, ಸಾಗರ್ ತೊರೆನೂರು, ಕಡ್ಲೇರ ತುಳಸಿ ಮೋಹನ್, ಹರ್ಷಿತ್, ಲೋಹಿತ್, ತೀರ್ಥಕುಮಾರ್ ಮಾಲಾದೇವಿ, ಜಗದೀಶ್ ಸಾಗರ್, ಎಸ್.ಕೆ. ಈಶ್ವರಿ ಸೇರಿದಂತೆ ಒಟ್ಟು 41 ಮಂದಿ ಕವಿಗಳು ಕವನ ವಾಚಿಸಿದರು.