ಸೋಮವಾರಪೇಟೆ, ಅ. 22: ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ದನಗಳ ಮಾಲೀಕರು ತಮ್ಮ ಸ್ಥಳಕ್ಕೆ ಕರೆದೊಯ್ಯಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

ಸಾರ್ವಜನಿಕ ರಸ್ತೆ ಮತ್ತು ಇತರೆಡೆಗಳಲ್ಲಿ ದನಗಳು ಸಂಚರಿಸುತ್ತಿರುವದು, ಹಗಲೂ ರಾತ್ರಿ ರಸ್ತೆ, ಬಸ್ ನಿಲ್ದಾಣದ ಆವರಣದಲ್ಲೇ ವಿಶ್ರಮಿಸುತ್ತಿರುವದರಿಂದ ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಆದುದರಿಂದ ಮಾಲೀಕರು ದನಗಳನ್ನು ಹೊರಗೆ ಬಿಡದೆ, ಕೊಟ್ಟಿಗೆಯಲ್ಲಿಯೇ ಕಟ್ಟಿ ಸಾಕಬೇಕು. ದನಗಳನ್ನು ರಸ್ತೆಗೆ ಬಿಟ್ಟು ಸಮಸ್ಯೆಯಾದಲ್ಲಿ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.