ಮೈಸೂರು ವಿಶ್ವ ವಿದ್ಯಾಲಯದಿಂದ ಗೌರವ

ಮಡಿಕೇರಿ, ಅ. 22: ಮೈಸೂರು ವಿಶ್ವ ವಿದ್ಯಾಲಯದ 100ನೇ ಘಟಿಕೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಚೆಟ್ಟಿಮಾನಿ ನಿವಾಸಿ ಪಿ. ಡೀನಾ ಹಾಗೂ ಸೋಮವಾರಪೇಟೆಯ ನಿವಾಸಿ ನಿಖಿಲ್‍ಗೌಡ ಅವರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

‘ಪೊಲಿಟಿಕಲ್ ಸೈನ್ಸ್’ ವಿಷಯದಲ್ಲಿ ಎಂ.ಎ ಪದವಿ ಹೊಂದಿ 3 ಚಿನ್ನದ ಪದಕಗಳನ್ನು ಡೀನಾ ಅವರು ತಮ್ಮದಾಗಿಸಿಕೊಂಡಿದ್ದಾರೆ. ಪೈಂಟಿಂಗ್, ಗ್ರಾಫಿಕ್ಸ್ ಹಾಗೂ ಶಿಲ್ಪಕಲಾ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿ 2 ಚಿನ್ನದ ಪದಕಗಳನ್ನು ನಿಖಿಲ್‍ಗೌಡ ಅವರು ಪಡೆದುಕೊಂಡಿದ್ದಾರೆ.