ಮಡಿಕೇರಿ, ಅ. 22: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು, ಪ್ರಾಂಗಣದಲ್ಲಿ ನಡೆಯುವ ಸಂತೆಯ ವ್ಯಾಪಾರಸ್ಥರಿಗೆ ನಿರ್ಧಿಷ್ಟ ಜಾಗವನ್ನು ಗುರುತು ಮಾಡಿ ಈ ಜಾಗದಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸಲು ಜಾಗವನ್ನು ಗುರುತಿಸಿಕೊಡುವುದು ಅವಶ್ಯಕವಾಗಿದೆ. ಆ ದಿಸೆಯಲ್ಲಿ ಸಮಿತಿಯು ಸಂತೆ ವ್ಯಾಪಾರಸ್ಥರು ಸಂತೆಯ ದಿನ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರಿಂದ ಸ್ಥಳಾವಕಾಶ ಕೋರಿ ಅರ್ಜಿ ಆಹ್ವಾನಿಸಲಾಗಿದೆ.

ತಾ. 27ರ ಸಂಜೆ 4 ಗಂಟೆ ಕೊನೆಯ ದಿನವಾಗಿದೆ. ಸಮಿತಿಯ ತೀರ್ಮಾನದಂತೆ ಉತ್ಪನ್ನವಾರು ವರ್ತಕರುಗಳನ್ನು ಪ್ರತ್ಯೇಕಿಸಿ ಪ್ರಾಂಗಣದಲ್ಲಿರುವ ಮುಚ್ಚಿದ ಹರಾಜುಕಟ್ಟ್ಟೆಯಲ್ಲಿರುವ ಜಾಗವನ್ನು ಚೀಟಿ ಎತ್ತುವ ಮುಖಾಂತರ ಆಯ್ಕೆ ಮಾಡಿ ವ್ಯಾಪಾರ ಸ್ಥಳ ಗುರುತು ಮಾಡಿಕೊಡಲಾಗುವುದು. ಈ ಜಾಗದ ಉಪಯೋಗಕ್ಕಾಗಿ ಇಲಾಖೆ ನಿರ್ದೇಶನಾಲಯದ ಸೂಚನೆಯಂತೆ ನಿರ್ವಹಣಾ ಶುಲ್ಕವನ್ನು ಭರಿಸುವುದು ಕಡ್ಡಾಯವಾಗಿದೆ. ತಾ. 28 ರಂದು ಮಧ್ಯಾಹ್ನ 12.30 ಗಂಟೆಗೆ ಸಮಿತಿಯ ಆಡಳಿತ ಮಂಡಳಿ ಹಾಗೂ ವ್ಯಾಪಾರಸ್ಥರ ಸಮಕ್ಷಮದಲ್ಲಿ ಚೀಟಿ ಎತ್ತುವ ಮುಖಾಂತರ ಸ್ಥಳವನ್ನು ಗುರುತು ಮಾಡಲಾಗುವುದು. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದು ಎಂದು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಕೋರಿದ್ದಾರೆ.