ಚೆಟ್ಟಳ್ಳಿ, ಅ. 22: ಉತ್ತರ ಪ್ರದೇಶದ ವೃಂದಾವನ ಹಾಗೂ ಮಥುರಾ ದೇವ ಸ್ಥಾನಕ್ಕೆ ತಲಕಾವೇರಿಯಿಂದ 555 ಲೀಟರ್‍ನಷ್ಟು ಕಾವೇರಿ ತೀರ್ಥವನ್ನು ಕಳುಹಿಸಿ ಕೊಡ ಲಾಗಿದೆ. ಸುಮಾರು ಮೂರು ಸಾವಿರ ಕಿಲೋ ಮೀಟರ್ ದೂರ ಇರುವ ದೇವಸ್ಥಾನಕ್ಕೆ ತೀರ್ಥವನ್ನು ಕೊಡಗಿನಿಂದ ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಬಟ್ಟೀರಾ ಶರೀನ್ ಅವರು ತಮ್ಮ ಪಿಕಪ್ ವಾಹನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಿ, ಅಲ್ಲಿಂದ ಏರ್ಲಿಫ್ಟ್ ಮುಖಾಂತರ ಮಥುರಾಕ್ಕೆ ರವಾನಿಸಿದ್ದಾರೆ.