ಸುಂಟಿಕೊಪ್ಪ, ಅ. 22: ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಸಾಮೂಹಿಕ ಆಯುಧಪೂಜಾ ಕಾರ್ಯಕ್ರಮವು ಈ ಬಾರಿ ಕೇವಲ ಕಚೇರಿ ಪೂಜೆಗೆ ಮಾತ್ರ ಸೀಮಿತವಾಗಲಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ತಿಳಿಸಿದ್ದಾರೆ.

ಕೋವಿಡ್ -19ರ ಕಾರಣದಿಂದ ವೇದಿಕೆ ಕಾರ್ಯಕ್ರಮ ಮತ್ತು ಸಾಮೂಹಿಕ ಆಟೋ ರಿಕ್ಷಾಗಳ ಪೂಜೆಯನ್ನು ರದ್ದುಪಡಿಸಲಾಗಿದೆ. ಯಾವುದೇ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಆಯೋಜಿಸದೆ ಸರಳವಾಗಿ ಕಚೇರಿಗೆ ಸೀಮಿತಗೊಳಿಸಲಾಗಿದೆ ಎಂದು ಸಂತೋಷ್ ತಿಳಿಸಿದ್ದಾರೆ.