ಮಡಿಕೇರಿ, ಅ. 21: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಆವರಣದಲ್ಲಿ ತಾ. 23 ರಿಂದ 26 ರವರೆಗೆ ದುರ್ಗಾ ಪೂಜೆ ಏರ್ಪಡಿಸಲಾಗಿದೆ.

ತಾ. 23 ರಂದು ಬೆಳಿಗ್ಗೆ 8 ಗಂಟೆಗೆ ದುರ್ಗಾ ಪೂಜೆ, 11 ಗಂಟೆಗೆ ಭಜನೆ ಹಾಗೂ 11.30ಕ್ಕೆ ಆರತಿ ಪುಷ್ಪಾಂಜಲಿ ನೆರವೇರಲಿದೆ. ತಾ. 24 ರಂದು ಬೆಳಿಗ್ಗೆ 8 ಗಂಟೆಗೆ ದುರ್ಗಾ ವಿಶೇಷ ಪೂಜೆ, 11 ಗಂಟೆಗೆ ಭಜನೆ, ಆರತಿ, 11.30ಕ್ಕೆ ಹೋಮ, 12.30ಕ್ಕೆ ಪುಷ್ಪಾಂಜಲಿ ಹಾಗೂ 12.45ಕ್ಕೆ ಭೋಜನ ಪ್ರಸಾದ ವಿತರಣೆಯಾಗಲಿದೆ.

ತಾ. 25 ರಂದು ಬೆಳಿಗ್ಗೆ 8 ಗಂಟೆಗೆ ದುರ್ಗಾ ಪೂಜೆ, 11 ಗಂಟೆಗೆ ಭಜನೆ, 11.30ಕ್ಕೆ ಆರತಿ ಪುಷ್ಪಾಂಜಲಿ ಏರ್ಪಡಿಸಲಾಗಿದೆ. ತಾ. 26 ರ ವಿಜಯದಶಮಿಯಂದು ಬೆಳಿಗ್ಗೆ 9 ಗಂಟೆಗೆ ಶ್ರೀ ದುರ್ಗಾದೇವಿ ದಶಮಿ ಪೂಜೆ ನೆರವೇರಲಿದ್ದು, ಈ ದಿನಗಳಲ್ಲಿ ಸಂಜೆ ಶ್ರೀ ರಾಮಕೃಷ್ಣರ ಸಂಧ್ಯಾರತಿ (6.30) ರ ನಂತರ ಶ್ರೀ ದುರ್ಗಾ ಆರತಿ ಹಾಗೂ ವಿಶೇಷ ಭಜನೆಗಳನ್ನು ಏರ್ಪಡಿಸಲಾಗಿದೆ ಎಂದು ಶಾರದಾಶ್ರಮದ ಪ್ರಕಟಣೆ ತಿಳಿಸಿದೆ.