ಕಣಿವೆ, ಅ. 21 : ವಿದೇಶಗಳಲ್ಲಿನ ಬೃಹತ್ ನಗರಗಳಲ್ಲಿ ನಗರಗಳ ಮಧ್ಯೆಯೇ ನದಿಗಳು ಹರಿದರೂ ಕೂಡ ಸ್ವಚ್ಛವಾಗಿರುತ್ತವೆ. ಆದರೆ ನಮ್ಮ ದೇಶದ ಸಪ್ತನದಿಗಳೇಕೆ ಕಲುಷಿತ ವಾಗಿವೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.ಕುಶಾಲನಗರದ ಕಾವೇರಿ ನದಿಯ ದಂಡೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ಮಹಾ ಆರತಿ ಬಳಗ ಹಾಗೂ ಅಖಿಲ ಭಾರತ ಸನ್ಯಾಸಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಮಾಮಿ ಕಾವೇರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, ಭಾರತ ದೇಶದ ನದಿಗಳು ಮಲಿನವಾಗಲು ಇಲ್ಲಿನ ಜನರ ಉದಾಸೀನವಲ್ಲದೆ ಮತ್ತೇನು ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು. ವಿಜ್ಞಾನದ ಬೆಳವಣಿಗೆ ಅಜ್ಞಾನಕ್ಕೆ ಕಾರಣವಾಗುತ್ತಿದೆಯಾ. ಏನೆಲ್ಲ ಸೃಷ್ಟಿಸುವ ಮಾನವನಿಗೆ ಮಣ್ಣು ಹಾಗೂ ನೀರನ್ನು ಸೃಷ್ಟಿಸಲು ಸಾಧ್ಯವೇ ? ಏಕೆ ನಮ್ಮ ಜನರಿಗೆ ನದಿಯ ಬಗ್ಗೆ ಅರಿವು ಮೂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕಲುಷಿತ ನೀರಿನ ಹರಿವಿನಿಂದ ನದಿ ನೀರು ಕಲುಷಿತವಾಗುವುದು ತಪ್ಪಬೇಕು. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಇಡೀ ಮಾನವ ಕೋಟಿ ಎಚ್ಚರವಹಿಸಿ ನದಿಯ ಪಾವಿತ್ರ್ಯತೆ ಉಳಿಸಲು ಕಾರಣ ರಾಗಬೇಕು.
ನದಿ ಹಾಗೂ ಪರಿಸರ ಉಳಿದರೆ ಮಾತ್ರ ಮಾನವನ ಉಳಿವು ಎಂದು ಶ್ರೀಗಳು ಹೇಳಿದರು. ಕುಶಾಲನಗರದಲ್ಲಿ ನದಿ ಪ್ರವಾಹ ತಪ್ಪಿಸಲು ಹೊಳೆನರಸೀಪುರದಲ್ಲಿ ಹೇಮಾವತಿ ನದಿಗೆ ಕಟ್ಟಿರುವ ಮಾದರಿಯಲ್ಲಿ ಕುಶಾಲನಗರದ ಸುತ್ತಲೂ ಕಾವೇರಿ ನದಿಗೆ ತಡೆಗೋಡೆ ನಿರ್ಮಿಸಲು ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಪರಿಸರ ಉಳಿಸಿರುವ ಕೊಡಗಿನವರು
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಕಳೆದ ಬಾರಿ ನದಿಯಲ್ಲಿನ ಹೂಳು ತೆಗೆದ ಬಳಿಕ ಈ ಬಾರಿ ಪ್ರವಾಹ ಒಂದಷ್ಟು ಕ್ಷೀಣಿಸಿದೆ. ಜೀವನದಿ ಕಾವೇರಿಯ ಸಂರಕ್ಷಣೆಗೆ ನದಿ ಪಾತ್ರದ ಉದ್ದಗಲದ ಜನರು ಹೆಚ್ಚು ಜಾಗೃತಗೊಂಡು ನದಿಯ ಪಾವಿತ್ರ್ಯಕ್ಕೆ ಒತ್ತು ನೀಡಬೇಕೆಂದು ಕರೆ ಕೊಟ್ಟರು.
ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಪ್ರವಾಹ ನಿರಂತರವಾಗಿ ಬರುತ್ತಿದೆ. ನದಿಯನ್ನು ಪ್ರತಿಯೊಬ್ಬರೂ
(ಮೊದಲ ಪುಟದಿಂದ) ತಾಯಿಯಂತೆ ಪೂಜ್ಯ ಭಾವದಿಂದ ನೋಡುವಂತಾದರೆ ಕಾವೇರಿ ಮಾತೆಯ ಕೃಪೆಯಿಂದ ಮುಂದೆ ಇಂತಹ ಅನಾಹುತಗಳಾಗದಿರಲಿ ಎಂದು ಪ್ರಾರ್ಥಿಸಿದರು. ಇದೀಗ ಸ್ವಚ್ಛತಾ ಆಂದೋಲನದ ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನದಿ ಕಲುಷಿತವಾಗುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಣ ಗೊಳ್ಳುವಂತಾಗಲಿ ಎಂದು ಆಶಿಸಿದರು.
ಜಿಲ್ಲೆಯಲ್ಲಿ ನೈಜ ಪರಿಸರವಾದಿ ಗಳಿದ್ದಾರೆ. ಆದರೆ, ಪರಿಸರದ ಹೆಸರಿನಲ್ಲಿ ಕೆಲವು ಪರಿಸರವ್ಯಾಧಿಗಳೂ ಇದ್ದು ಇಂತಹವರು ಪರಿಸರಕ್ಕೆ ವ್ಯಾಧಿಯಾಗಬಾರದು ಎಂದು ಸಲಹೆಯಿತ್ತರು. ಮರ ಕಡಿದರೆ ಮಳೆ ಬರಲ್ಲ ಎಂಬ ಮೊಂಡುವಾದ ಮಾಡ ಬಾರದು. ಏಕೆಂದರೆ, ಮೂಲತಃ ಕೊಡಗಿನ ಜನ ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ. ಪರಿಸರಕ್ಕೆ ಪೂರಕವಾದ ಕೆಲಸವನ್ನು ಕೊಡಗಿನ ಜನ ಮಾಡಿಕೊಂಡು ಬರುತ್ತಿದ್ದಾರೆ. ಕಾಫಿ ತೋಟಗಳೇ ಇದಕ್ಕೆ ಸಾಕ್ಷಿ. ಕಾಫಿ ತೋಟಗಳಲ್ಲಿ ಕಾಫಿ ಗಿಡಗಳೇ ಪರಿಸರ ಸ್ನೇಹಿ. ಜೊತೆಗೆ ತೋಟಗಳಲ್ಲಿರುವ ಮರಗಳೂ ಪರಿಸರಕ್ಕೆ ಪೂರಕವಾಗಿದೆ. ಒಂದು ಎಕರೆ ಜಾಗದಲ್ಲಿ ಕಾಫಿ ತೋಟದಲ್ಲಿಯೇ ನೂರಾರು ಮರಗಳನ್ನು ಬೆಳೆಸಿರುತ್ತಾರೆ. ನೆರಳು ಜಾಸ್ತಿಯಾದಾಗ ಮರ ಕಡಿಯುತ್ತಾರೆ (ಮೊದಲ ಪುಟದಿಂದ) ತಾಯಿಯಂತೆ ಪೂಜ್ಯ ಭಾವದಿಂದ ನೋಡುವಂತಾದರೆ ಕಾವೇರಿ ಮಾತೆಯ ಕೃಪೆಯಿಂದ ಮುಂದೆ ಇಂತಹ ಅನಾಹುತಗಳಾಗದಿರಲಿ ಎಂದು ಪ್ರಾರ್ಥಿಸಿದರು. ಇದೀಗ ಸ್ವಚ್ಛತಾ ಆಂದೋಲನದ ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನದಿ ಕಲುಷಿತವಾಗುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಣ ಗೊಳ್ಳುವಂತಾಗಲಿ ಎಂದು ಆಶಿಸಿದರು.
ಜಿಲ್ಲೆಯಲ್ಲಿ ನೈಜ ಪರಿಸರವಾದಿ ಗಳಿದ್ದಾರೆ. ಆದರೆ, ಪರಿಸರದ ಹೆಸರಿನಲ್ಲಿ ಕೆಲವು ಪರಿಸರವ್ಯಾಧಿಗಳೂ ಇದ್ದು ಇಂತಹವರು ಪರಿಸರಕ್ಕೆ ವ್ಯಾಧಿಯಾಗಬಾರದು ಎಂದು ಸಲಹೆಯಿತ್ತರು. ಮರ ಕಡಿದರೆ ಮಳೆ ಬರಲ್ಲ ಎಂಬ ಮೊಂಡುವಾದ ಮಾಡ ಬಾರದು. ಏಕೆಂದರೆ, ಮೂಲತಃ ಕೊಡಗಿನ ಜನ ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ. ಪರಿಸರಕ್ಕೆ ಪೂರಕವಾದ ಕೆಲಸವನ್ನು ಕೊಡಗಿನ ಜನ ಮಾಡಿಕೊಂಡು ಬರುತ್ತಿದ್ದಾರೆ. ಕಾಫಿ ತೋಟಗಳೇ ಇದಕ್ಕೆ ಸಾಕ್ಷಿ. ಕಾಫಿ ತೋಟಗಳಲ್ಲಿ ಕಾಫಿ ಗಿಡಗಳೇ ಪರಿಸರ ಸ್ನೇಹಿ. ಜೊತೆಗೆ ತೋಟಗಳಲ್ಲಿರುವ ಮರಗಳೂ ಪರಿಸರಕ್ಕೆ ಪೂರಕವಾಗಿದೆ. ಒಂದು ಎಕರೆ ಜಾಗದಲ್ಲಿ ಕಾಫಿ ತೋಟದಲ್ಲಿಯೇ ನೂರಾರು ಮರಗಳನ್ನು ಬೆಳೆಸಿರುತ್ತಾರೆ. ನೆರಳು ಜಾಸ್ತಿಯಾದಾಗ ಮರ ಕಡಿಯುತ್ತಾರೆ ಏನು ಕೊಡುತ್ತಿದೆ ಎಂದು ಪ್ರಶ್ನಿಸಿದರು. ತಲಕಾವೇರಿಯ ದುರ್ಘಟನೆಗೆ ಅಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಇಂಗುಗುಂಡಿ, ಆನೆಗುಂಡಿಗಳೇ ಕಾರಣ. ಯಾರೋ ಬಂದು ಅವರಿಗಿಷ್ಟಕ್ಕೆ ಬಂದ ಯೋಜನೆಗಳನ್ನು ಮಾಡಲಿಕ್ಕಾ ಈ ಕ್ಷೇತ್ರ ಇರೋದು? ಇದಕ್ಕೆಲ್ಲಾ ಕಾರಣರಾರು ? ಇದರ ಬಗ್ಗೆ ಜನಪ್ರತಿನಿಧಿಗಳು ತೀವ್ರ ಗಮನ ಹರಿಸÀಬೇಕು. ಇಂಗುಗುಂಡಿ ಗಳನ್ನು ಮುಚ್ಚಿಸಬೇಕು. ಈ ಹಿಂದೆ ಶಿವಲಿಂಗವನ್ನು ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಮುಜರಾಯಿ ಸಮಿತಿಯ ಆಗಮಿಕರ ಸಮ್ಮುಖದಲ್ಲಿ ಭೂಮಿಯೊಳಗೆ ಸೇರಿಸಲಾಗಿದೆ ಎಂಬ ಮಾಹಿತಿ ಇತ್ತು. ಇದನ್ನು ಭೂಮಿ ಯಿಂದ ಮೇಲೆ ತೆಗೆಯುವ ಕೆಲಸ ವಾಗಬೇಕು ಎಂದು ಹೇಳಿದ ಮೇಲೆ ಅದನ್ನು ತೆಗೆದು ಅಲ್ಲಿನ ಅಡುಗೆ ಕೋಣೆಯೊಳಗೆ ಇಡಲಾಗಿದೆ. ಈ ಧಾರ್ಮಿಕ ಅಜಾಗೃತಿಯನ್ನು ಸರಿಪಡಿಸದಿದ್ದಲ್ಲಿ ಮುಂದೆ ಮತ್ತಷ್ಟು ಅನಾಹುತಗಳು ಆಗಲಿವೆ ಎಂಬ ಆತಂಕವನ್ನು ಹೊರಹಾಕಿದರು. ದೇಶದ ಪ್ರಮುಖ ತಂತ್ರಿಗಳು ಹಾಗೂ ವೇದ ಪಂಡಿತ ಪ್ರಮುಖರನ್ನು ಸರ್ಕಾರವೇ ಕರೆಸಿ ಪರಹಾರ ಮಾಡಿಸಲಿ. ನಾಡಿಗೆ ಅನಾಹುತ ಗಳಾಗುವುದನ್ನು ತಡೆಯುವ ಕೆಲಸ ಸರ್ಕಾರದ್ದಲ್ಲವೇ ಎಂದು ಅವರು ಶಾಸಕರಲ್ಲಿ ಮನವಿ ಮಾಡಿದರು. ತಲಕಾವೇರಿಯ ಕಾವೇರಿ ಮಾತೆಯ ಮೂಲದಲ್ಲಿ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಆಗಿರುವ ದೋಷಗಳನ್ನು ಮೊದಲು ಸರಿಮಾಡಬೇಕಿದೆ. ಜನಪ್ರತಿನಿಧಿಗಳು ಈ ಕ್ರಮಗಳಿಗೆ ಮುಂದಾಗಬೇಕು. ಈ ಕಾರ್ಯಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ರಾಜೇಂದ್ರ ಹೇಳಿದರಲ್ಲದೇ ಎಲ್ಲರಲ್ಲೂ ಧಾರ್ಮಿಕ ಪ್ರಜ್ಞೆ ಮೂಡಬೇಕಿದೆ ಎಂದು ಸಲಯೆಯಿತ್ತರು. ಕಾವೇರಿಯನ್ನು ಹುಡುಗಾಟಿಕೆಯಾಗಿ ಯಾರೂ ಕೂಡ ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.
ಈ ಬಗ್ಗೆ ಸಭೆಯಲ್ಲಿ ಪ್ರತಿಕ್ರಿಯಿಸಿದ ಶಾಸಕ ರಂಜನ್ ಅವರು ಈ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಇತರ ಶಾಸಕರುಗಳೊಂದಿಗೆ ಚರ್ಚಿಸಿ ಸರ್ಕಾರಿ ಮಟ್ಟದಲ್ಲಿ ಪ್ರ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ಯಿತ್ತರು. ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಚರಣ್, ಪೆÇನ್ನಂಪೇಟೆ ರಾಮಕೃಷ್ಣಾನಂದ ಆಶ್ರಮದ ಆತ್ಮಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ರಾಮನಾಥಪುರದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಕುಮಾರಸ್ವಾಮಿ, ವನಿತಾ ಚಂದ್ರಮೋಹನ್ ಇದ್ದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು. ನಮಾಮಿ ಕಾವೇರಿ ಸ್ಮರಣ ಸಂಚಿಕೆಯ ಸಂಪಾದಕೀಯ ಮಂಡಳಿಯ ಎಚ್.ಟಿ.ಅನಿಲ್, ಬಿ.ಸಿ.ದಿನೇಶ್, ವಿನೋದ್ ಇದ್ದರು. ಇದೇ ಸಂದರ್ಭ ದಲ್ಲಿ ನೂರಕ್ಕೂ ಹೆಚ್ಚು ಮಹಾಆರತಿ ಪೂಜಾ ವಿಧಿಗಳನ್ನು ನಡೆಸಿಕೊಟ್ಟ ಅರ್ಚಕ ಕೃಷ್ಣಮೂರ್ತಿ ಭಟ್, ಪೌರ ಕಾರ್ಮಿಕರಾದ ಪುರುಷೋತ್ತಮ, ಗಣೇಶ ಅವರುಗಳÀನ್ನು ಸನ್ಮಾನಿಸಲಾಯಿತು.
-ವರದಿ: ಕೆ.ಎಸ್.ಮೂರ್ತಿ