ಶ್ರೀಮಂಗಲ, ಅ. 21 : ಅಖಿಲ ಕೊಡವ ಸಮಾಜದ ಆಶ್ರಯದಲ್ಲಿ ವೀರಾಜಪೇಟೆಯ ಕೇಂದ್ರ ಕಚೇರಿಯಲ್ಲಿ ಕಾವೇರಿ ಕಣಿ ಪೂಜೆ ಕಾರ್ಯಕ್ರಮವನ್ನು ಸಾಂಪ್ರದಾ ಯಿಕವಾಗಿ ಆಚರಿಸಲಾಯಿತು.

ಈ ಸಂದರ್ಭ ಕಾವೇರಿ ಮಾತೆಯ ಪ್ರತಿರೂಪಕ್ಕೆ ಅಕ್ಕಿ ಹಾಕಿ ಮಾತನಾಡಿದ ಹಿರಿಯ ಜನಪದ ತಜ್ಞ, ಸಂಶೋಧಕ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಅನಾದಿಕಾಲ ದಿಂದಲೂ ಕಾವೇರಿ ಹಾಗೂ ಕೊಡವರ ನಡುವಿನ ಬಾಂಧವ್ಯ ತಾಯಿ ಮಕ್ಕಳಂತಿದ್ದು, ಕಾವೇರಿ ಮಾತೆ ಜಲರೂಪಿಣಿಯಾಗಿ ಲೋಕ ಕಲ್ಯಾಣಕ್ಕಾಗಿ ಹರಿಯುವ ಸಂದರ್ಭ ಕೊಡವರಿಗೆ ನೀಡಿದ ಭಾಷೆಯ ಅನ್ವಯ ಪ್ರತಿವರ್ಷ ತುಲಾಸಂಕ್ರಮಣ ದಂದು ಕಾವೇರಿ ತೀರ್ಥರೂಪಿಣಿ ಯಾಗಿ ಭಕ್ತರಿಗೆ ದರ್ಶನ ನೀಡುತ್ತಿ ದ್ದಾರೆ. ಈ ಸಂದರ್ಭ ಕೊಡವರು ಸೇರಿದಂತೆ ಎಲ್ಲಾ ಭಕ್ತರು ತಲಕಾವೇರಿಗೆ ಭೇಟಿ ನೀಡಿ ತೀರ್ಥೋದ್ಭವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಕೊಡವರು ಪ್ರತಿ ಮನೆಯಲ್ಲಿಯೂ ಕಣಿ ಪೂಜೆಯನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆ. ಕೊಡವರು ಪ್ರಕೃತಿಯ ಆರಾಧಕರಾಗಿ ರುವುದರಿಂದ ವಿಗ್ರಹವಿಟ್ಟು ಪೂಜೆ ಮಾಡುವುದಿಲ್ಲ. ಪ್ರಕೃತಿಯಲ್ಲಿ ಬೆಳೆದ ತೆಂಗಿನ ಕಾಯಿ, ಸೌತೆ ಕಾಯಿಯನ್ನಿಟ್ಟು ಅಲಂಕರಿಸಿ ಸಾಂಪ್ರದಾಯಿಕ ಆಭರಣ ವನ್ನು ತೊಡಿಸಿ ಕಾವೇರಿಯ ಪ್ರತಿರೂಪ ವಾಗಿ ಪೂಜಿಸಲಾಗುತ್ತದೆ. ಆದ್ದರಿಂದ ಕಣಿ ಪೂಜೆಗೆ ಹೆಚ್ಚಿನ ಮಹತ್ವವಿದೆ ಎಂದು ವಿವರಿಸಿದರು. (ಮೊದಲ ಪುಟದಿಂದ) ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಮಾತನಾಡಿ ದಕ್ಷಿಣ ಕೊಡಗಿನ ಮರೆನಾಡ್ ಸೇರಿದಂತೆ ಬಹುದೂರದ ಪ್ರದೇಶಗಳಿಂದ ಎರಡು ಮೂರು ದಿನಗಳ ಮೊದಲೇ ಹಿರಿಯ ದಂಪತಿಗಳು ಸಂಸಾರದೊಂದಿಗೆ ಸಾಂಪ್ರಾದಾಯಿಕ ಉಡುಪಿನಲ್ಲಿ ಪಾದಯಾತ್ರೆಯ ಮೂಲಕ ತೀರ್ಥೊದ್ಭವಕ್ಕೆ ಬರುತ್ತಿದ್ದರು. ವಾಹನ ಸೌಕರ್ಯವಿಲ್ಲದ ಕಾಲಘಟ್ಟದಲ್ಲಿಯೂ ಕೊಡವರು ಕಾಲ್ನಡಿಗೆಯಲ್ಲೇ ಬಂದು ತೀರ್ಥೊದ್ಭವದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ಕೊಡವರು ಆತ್ಮಗೌರವವನ್ನು ಪ್ರತಿಯೊಬ್ಬರು ಎತ್ತಿ ಹಿಡಿಯಬೇಕು. ತಮ್ಮ ವೈಯಕ್ತಿಕ ಬದುಕು ಮತ್ತು ಪ್ರಗತಿಗಷ್ಟೇ ಸೀಮಿತವಾಗದೇ ಕೊಡವಾಮೆ ಹಾಗೂ ಕೊಡವ ಜನಾಂಗದ ಶ್ರೇಯಸ್ಸಿಗಾಗಿ ಪಣತೊಡಬೇಕೆಂದು ಕರೆ ನೀಡಿದರು.

ಅಖಿಲ ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ (ಮೊದಲ ಪುಟದಿಂದ) ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಮಾತನಾಡಿ ದಕ್ಷಿಣ ಕೊಡಗಿನ ಮರೆನಾಡ್ ಸೇರಿದಂತೆ ಬಹುದೂರದ ಪ್ರದೇಶಗಳಿಂದ ಎರಡು ಮೂರು ದಿನಗಳ ಮೊದಲೇ ಹಿರಿಯ ದಂಪತಿಗಳು ಸಂಸಾರದೊಂದಿಗೆ ಸಾಂಪ್ರಾದಾಯಿಕ ಉಡುಪಿನಲ್ಲಿ ಪಾದಯಾತ್ರೆಯ ಮೂಲಕ ತೀರ್ಥೊದ್ಭವಕ್ಕೆ ಬರುತ್ತಿದ್ದರು. ವಾಹನ ಸೌಕರ್ಯವಿಲ್ಲದ ಕಾಲಘಟ್ಟದಲ್ಲಿಯೂ ಕೊಡವರು ಕಾಲ್ನಡಿಗೆಯಲ್ಲೇ ಬಂದು ತೀರ್ಥೊದ್ಭವದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ಕೊಡವರು ಆತ್ಮಗೌರವವನ್ನು ಪ್ರತಿಯೊಬ್ಬರು ಎತ್ತಿ ಹಿಡಿಯಬೇಕು. ತಮ್ಮ ವೈಯಕ್ತಿಕ ಬದುಕು ಮತ್ತು ಪ್ರಗತಿಗಷ್ಟೇ ಸೀಮಿತವಾಗದೇ ಕೊಡವಾಮೆ ಹಾಗೂ ಕೊಡವ ಜನಾಂಗದ ಶ್ರೇಯಸ್ಸಿಗಾಗಿ ಪಣತೊಡಬೇಕೆಂದು ಕರೆ ನೀಡಿದರು.

ಅಖಿಲ ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ದಿನಗಳಲ್ಲಿ ನೈಜ ಭಕ್ತರಿಗೆ ಸೂಕ್ತ ಅವಕಾಶ ಕಲ್ಪಿಸಿ ಪ್ರವಾಸಿಗರನ್ನು ಹೊರತುಪಡಿಸಿ ನೈಜ ಭಕ್ತರಿಗೆ ಅವಕಾಶ ಕಲ್ಪಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕೆಂದು ಹೇಳಿದರು.

ಅಖಿಲ ಕೊಡವ ಸಮಾಜದ ಕೇಂದ್ರ ಸಮಿತ್ಯ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಪದಾಧಿಕಾರಿಗಳಾದ ಚೇಂದಂಡ ವಸಂತ್, ಐನಂಡ ಜಪ್ಪು ಅಚ್ಚಪ್ಪ, ಮುಲ್ಲೇಂಗಡ ಶಂಕರಿ ಪೆÇನ್ನಪ್ಪ, ಅಪ್ಪುಮಣಿಯಂಡ ತುಳಸಿ, ಮೂವೇರ ರೇಖಾ ಪ್ರಕಾಶ್, ಅಖಿಲ ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್ತಿನ ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ, ಪದಾಧಿಕಾರಿಗಳಾದ ಕಡೇಮಾಡ ಕವಿತ, ವಾಂಚೀರ ಜಾನ್ಸಿ, ಮಂಡೇಪಂಡ ತ್ಯಾಗಿ, ಯುವ ಘಟಕದ ಉಪಾಧ್ಯಕ್ಷ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಹಾಜರಿದ್ದರು.