ಮಡಿಕೇರಿ, ಅ. 21: ಶ್ರೀಮಂಗಲ ನಾಡು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಕಾವೇರಿ ಸಂಕ್ರಮಣದ ಪ್ರಯುಕ್ತ ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿ-ಗಣೇಶ ಸೇವಾ ಸಮಿತಿಯ ಸದಸ್ಯರು ಸಂಗ್ರಹಿಸಿ ತಂದಿದ್ದ ಕಾವೇರಿ ತೀರ್ಥವನ್ನು ಭಕ್ತರಿಗೆ ವಿತರಿಸಲಾಯಿತು.
ತೀರ್ಥ ಪೂಜೆಯೊಂದಿಗೆ ಪರಿಷತ್ ಕಚೇರಿಯಲ್ಲಿ ತೀರ್ಥ ವಿತರಿಸಲಾಯಿತು. ಪರಿಷತ್‍ನ ಉಪಾಧ್ಯಕ್ಷರಾದ ಬೊಜ್ಜಂಗಡ ಶೈಲಾ ಸುಬ್ರಮಣಿ, ಕಾಳಿಮಾಡ ಸೀಮ, ಯಶು, ಚೋನಿರ ಪವಿ, ಕೋಳೆರ ಗ್ರೇಸಿ, ಭಾರತಿ ಮೊದಲಾದವರು ಈ ಕಾರ್ಯಕ್ಕೆ ಸಹಕರಿಸಿದ್ದಾಗಿ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಕಟ್ಟೇರ ಸುಶೀಲ ಅಚ್ಚಪ್ಪ ತಿಳಿಸಿದ್ದಾರೆ.