ಸೋಮವಾರಪೇಟೆ, ಅ. 21: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಕಾವೇರಿ ತೀರ್ಥೋದ್ಭವ ಅಂಗವಾಗಿ ಪಟ್ಟಣ ವ್ಯಾಪ್ತಿಯ ಐವರು ಬಡ ಮಂದಿಗೆ ದಿನಸಿ, ತರಕಾರಿ ಕಿಟ್‍ಗಳನ್ನು ವಿತರಿಸಲಾಯಿತು.

ಪಟ್ಟಣದ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹರಪಳ್ಳಿ ರವೀಂದ್ರ ತರಕಾರಿ ಮತ್ತು ದಿನಸಿ ಕಿಟ್ ವಿತರಿಸಿದರು. ಇದರೊಂದಿಗೆ ಅನಾರೋಗ್ಯಪೀಡಿತರಾಗಿರುವ ಚೌಡ್ಲು ಗ್ರಾಮದ ರವಿ ಅವರಿಗೆ ಕಿಟ್‍ನೊಂದಿಗೆ ರೂ. 1 ಸಾವಿರ ಸಹಾಯಧನ ವಿತರಿಸಿದರು.

ಕಾರ್ಯಕ್ರಮದಲ್ಲಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಕೆ.ಪಿ. ರವೀಶ್, ರೈತ ಸಂಘದ ಚಂದ್ರಪ್ಪ, ಹೊನ್ನಪ್ಪ, ಇತರರು ಉಪಸ್ಥಿತರಿದ್ದರು.