ಮಡಿಕೇರಿ, ಅ. 21: ಕಾವೇರಿ ಸಂಕ್ರಮಣದ ಅಂಗವಾಗಿ ತೀರ್ಥೋ ದ್ಭವದ ಬಳಿಕ ಜರುಗುವ ಕಣಿಪೂಜೆ ಯನ್ನು ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ವ್ಯಾಟ್ಸಾಪ್ ಗುಂಪಿನಲ್ಲಿ ಸ್ಪರ್ಧೆಯ ಮಾದರಿಯಲ್ಲಿ ಏರ್ಪಡಿಸಲಾಗಿತ್ತು. ಕಾವೇರಿ ಮಾತೆಯನ್ನು ಮನೆ ಮನೆಯಲ್ಲಿ ವಿವಿಧ ರೀತಿಯಲ್ಲಿ ಶೃಂಗರಿಸಿ ಪೂಜಿಸಿದ ಆಕೃತಿಯ ಆಕರ್ಷಕ ಚಿತ್ರವನ್ನು ಪರಿಗಣಿಸಿ ಇದಕ್ಕೆ ಬಹುಮಾನವನ್ನು ನೀಡಲಾಯಿತು.

ಇದರಲ್ಲಿ ಒಟ್ಟು 60 ಮಂದಿ ಪಾಲ್ಗೊಂಡಿದ್ದು, ಪ್ರಥಮ ಬಹುಮಾನ ವನ್ನು ಮೂವೆರ ಆರತಿ, ದ್ವಿತೀಯ ನೆರವಂಡ ಅನಿತಾ ಹಾಗೂ ತೃತೀಯ ಬಹುಮಾನವನ್ನು ಮಲ್ಚೀರ ಸೀಮಾ ಪಡೆದುಕೊಂಡರು. ಸಮಾಧಾನಕರ ಬಹುಮಾನ ಪಳಂಗಂಡ ರೇಖಾ ಹಾಗೂ ಓಡಿಯಂಡ ಜಾನ್ಸಿ ಪಾಲಾಯಿತು. ಮೊದಲ ಮೂರು ಬಹುಮಾನವನ್ನು ಬೊಳ್ಳಜೀರ ಯಮುನಾ ಅಯ್ಯಪ್ಪ ಹಾಗೂ ಸಮಾಧಾನಕಾರ ಬಹುಮಾನವನ್ನು ಕನ್ನಂಡ ಕವಿತಾ ಬೊಳ್ಳಪ್ಪ ಪ್ರಾಯೋಜಿಸಿ ದ್ದರು. ತೀರ್ಪುಗಾರ ರಾಗಿ ಕೂಟದ ಅಧ್ಯಕ್ಷರಾಗಿರುವ ಕನ್ನಂಡ ಕವಿತಾ ಹಾಗೂ ಚೋಕೀರ ಅನಿತಾದೇವಯ್ಯ ಕಾರ್ಯನಿರ್ವ ಹಿಸಿದರು.