ನಾಪೆÇೀಕ್ಲು, ಅ. 21: ನಾಪೆÇೀಕ್ಲು ಪಟ್ಟಣದಿಂದ ಪಾರಾಣೆ ಮೂಲಕ ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಕೈಕಾಡು ಗ್ರಾಮದಲ್ಲಿರುವ ಎತ್ತುಕಡು ಸೇತುವೆ ಸೂಕ್ತ ನಿರ್ವಹಣೆಯಿಲ್ಲದೆ ಗಿಡಗಂಟಿಗಳಿಂದ ಕೂಡಿದ್ದು, ಶಿಥಿಲಾವಸ್ಥೆ ತಲುಪಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದರ ದುರಸ್ತಿ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನಹರಿಸುತ್ತಿಲ್ಲ. 1956ರಲ್ಲಿ ನಿರ್ಮಿಸಲಾದ ಈ ಸೇತುವೆ ಪಾರಾಣೆ ವಿಭಾಗದ ಜನಕ್ಕೆ ನಾಪೆÇೀಕ್ಲು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಹಾಗೆಯೇ, ನಾಪೆÇೀಕ್ಲುವಿನಿಂದ ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆಯಾಗಿದೆ ಎನ್ನುತ್ತಾರೆ ಈ ವ್ಯಾಪ್ತಿಯ ಜನ.
ಸ್ಥಗಿತಗೊಂಡ ರಸ್ತೆ ಕಾರ್ಯ: ನಾಪೆÇೀಕ್ಲು–ಕಡಂಗ ಮುಖ್ಯ ರಸ್ತೆಯ ಕಡಂಗದಿಂದ ನಾಪೆÇೀಕ್ಲು ಪಟ್ಟಣಕ್ಕೆ ಸುಗಮ ಸಂಚಾರ ವ್ಯವಸ್ಥೆಕೈಗೊಳ್ಳುವ ಉದ್ದೇಶದಿಂದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ 2 ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮತ್ತು ನೂತನ ಡಾಮರೀಕರಣ ಕಾರ್ಯ ಕೈಗೊಳ್ಳಲಾಯಿತು. ರಸ್ತೆ ಅಗಲೀಕರಣವನ್ನು ಪಾರಾಣೆ ಜಂಕ್ಷನ್‍ವರೆಗೆ ಮಾತ್ರ ಮಾಡಿ ಉಳಿದ ರಸ್ತೆಯನ್ನು ಹಾಗೆಯೇ ಬಿಡಲಾಗಿದೆ. ರಸ್ತೆ ಅಗಲೀಕರಣ ಕಾರಣದಿಂದ ರಸ್ತೆಯ ಡಾಮರು ಸಂಪೂರ್ಣ ಹಾಳಾಗಿ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವದರಿಂದ ರಸ್ತೆ ಯಾವದು, ಗುಂಡಿ ಯಾವದು ಎಂದು ತಿಳಿಯದೆ ವಾಹನಗಳು ಗುಂಡಿಗೆ ಬಿದ್ದು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಶಾಸಕರು, ಲೋಕೋಪಯೋಗಿ ಇಲಾಖೆ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. -ಪಿ.ವಿ. ಪ್ರಭಾಕರ್